ಗೋಕಾಕ:ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು
ಗೋಕಾಕ ಜು 19 : ನೀರಿನ ರಭಸಕ್ಕೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಬುಧವಾರದಂದು ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಸಮೀಪ ನಡೆದಿದೆ
ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಬ್ರಿಡ್ಜ್ ಕಂ ಬ್ಯಾರೆಜ್ ನಿಂದ ಹೆಚ್ಚು ನೀರು ಬಂದ ಹಿನ್ನೆಲೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಸಂಕಷ್ಟಕ್ಕೆ ಸಿಲುಕಿದ್ದರು.ಅವರು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಸಂದರ್ಭದಲ್ಲಿ ಬ್ರಿಡ್ಜ್ನ ಕಲ್ಲುಗಳನ್ನು ಹಿಡಿದು ರಕ್ಷಣೆಗೆ ಮನವಿ ಮಾಡುತ್ತಿದ್ದ ವ್ಯಕ್ತಿಯನ್ನು ಕಂಡ ನಾಲ್ವರು ಸ್ಥಳೀಯ ಯುವಕರು ತಕ್ಷಣವೇ ಸಹಾಯಕ್ಕೆ ನೆರವಾದರು. ಎಂದು ತಿಳಿದು ಬಂದಿದೆ