RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಜಿಲ್ಲಾ ಪ್ರವಾಸ

ಗೋಕಾಕ:ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಜಿಲ್ಲಾ ಪ್ರವಾಸ 

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಜಿಲ್ಲಾ ಪ್ರವಾಸ

ಗೋಕಾಕ ಜು 13 : ಪೌರಾಡಳಿತ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.
ದಿ. 14ರಂದು ಮುಂಜಾನೆ 10 ಗಂಟೆಗೆ ಗೋಕಾಕದಿಂದ ಅಥಣಿಗೆ ಪ್ರಯಾಣ ಬೆಳೆಸಿ ಅಲ್ಲಿಯ ಪ್ರವಾಸಿ ಮಂದಿರದಲ್ಲಿ ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಭೇಟಿ. ಸಂಜೆ 6 ಗಂಟೆಗೆ ಗೋಕಾಕಕ್ಕೆ ಆಗಮಿಸಿ ವಾಸ್ತವ್ಯ.
ದಿ. 15ರಂದು ಮುಂಜಾನೆ 10-30ಕ್ಕೆ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದ ಕಸ ಮುಕ್ತ ನಗರಗಳನ್ನಾಗಿಸುವ ಮಾಡುವ ಕುರಿತು ಪೌರಾಡಳಿತ ಇಲಾಖೆಯ ಕಾರ್ಯಾಗಾರದಲ್ಲಿ ಭಾಗವಹಿಸುವದು. ಮಧ್ಯಾನ್ಹ 1-30 ಗಂಟೆಗೆ ಚಿಕ್ಕೋಡಿ ತಾಲೂಕಿನ ಬೋರಗಾಂವದಲ್ಲಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವದು. ಸಂಜೆ 6 ಗಂಟೆಗೆ ಗೋಕಾಕಕ್ಕೆ ಹಿಂತಿರುಗಿ ವಾಸ್ತವ್ಯ.
ದಿ. 16ರಂದು ಮುಂಜಾನೆ 10-30ಕ್ಕೆ ಬೆಳಗಾವಿಗೆ ಹೊರಟು ಸಕ್ರ್ಯೂಟ ಹೌಸದಲ್ಲಿ ಸಾರ್ವಜನಿಕರ ಭೇಟಿ. ಸಂಜೆ 4-30ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ.

Related posts: