RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ : ರೋಟರಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

ಗೋಕಾಕ : ರೋಟರಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ 

ದಿಲೀಪ ಮೆಳವಂಕಿ

ರೋಟರಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

ಗೋಕಾಕ ಜೂ 29 : ಇಲ್ಲಿಯ ರೋಟರಿ ಸಂಸ್ಥೆಯ 2018-19ನೇಯ ಸಾಲಿನ ಅಧ್ಯಕ್ಷರಾಗಿ ದಿಲೀಪ ಮೆಳವಂಕಿ ಕಾರ್ಯದರ್ಶಿಯಾಗಿ ವಿಶ್ವನಾಥ ಕಡಕೋಳ, ಖಜಾಂಚಿಯಾಗಿ ಕೆಂಚಪ್ಪ ಭರಮನ್ನವರ, ಇನ್ನರ್‍ವಿಲ್ ಸಂಸ್ಥೆಯ ಅಧ್ಯಕ್ಷೆಯಾಗಿ ನಮೀತಾ ಆಜರಿ ಕಾರ್ಯದರ್ಶಿಯಾಗಿ ಗಿರಿಜಾ ಮುನ್ನೋಳಿಮಠ,ಖಜಾಂಚಿಯಾಗಿ ವಿದ್ಯಾ ಗುಲ್ಲ ಆಯ್ಕೆಯಾಗಿದ್ದಾರೆ. ನಗರದ ರೋಟರಿ ರಕ್ತ ಭಂಡಾರದಲ್ಲಿ ಜುಲೈ 1ರಂದು ಮುಂಜಾನೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.


ಅಧಿಕಾರ ಹಸ್ತಾಂತರ ಸಮಾರಂಭದ ದಿವ್ಯ ಸಾನಿಧ್ಯವನ್ನು ಘೋಡಗೇರಿಯ ಶಿವಾನಂದಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಆಗಮಿಸಲಿದ್ದು,ಹಸ್ತಾಂತರ ಅಧಿಕಾರಿಯಾಗಿ ಸಹಾಯಕ ಪ್ರಾಂತ್ಯಪಾಲ ನಿರ್ಲೆಕರ ಆಗಮಿಸಲಿದ್ದಾರೆ.

Related posts: