ಕಿತ್ತೂರ : ಅಭಿಮಾನಿಗಳ ಕೃತಜ್ಞತೆ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ

ಅಭಿಮಾನಿಗಳ ಕೃತಜ್ಞತೆ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ
ನೇಗಿನಹಾಳ ಮೇ 16 : ನಾನು ಪಕ್ಷೇತರನಾಗಿ ಸ್ಪರ್ಧಿಸಿದರು ಕಿತ್ತೂರ ನಾಡಿನ ಜನತೆ ಅಪಾರ ಬೆಂಬಲ ನೀಡಿರುವುದಕ್ಕೆ ಅವರಿಗೆ ದನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ನೇಗಿನಹಾಳ ಗ್ರಾಮದ ತಮ್ಮ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಮಾತನಾಡಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಷ್ಟ್ರೀಯ ಪಕ್ಷಗಳ ಪರ ಸ್ಪರ್ಧಿಸಲು ಮುಂದಾಗಿದ್ದು ನಂತರ ಪಕ್ಷೇತರನಾಗಿ ಸ್ಪರ್ಧಿಸಿದ್ದರಿಂದ ಜನರಲ್ಲಿ ಗೊಂದಲವುಂಟಾಗಿದೆ, ಹಲವರು ನನ್ನನ್ನು ಪಕ್ಷೇತರ ಅಭ್ಯರ್ಥಿ ಗುರಿತಿಸುವಲ್ಲಿ ವಿಫಲರಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮತ ನೀಡಿದ್ದಾರೆ. ನನ್ನ ಕ್ರ.ಸಂ ಸಂಪೂರ್ಣ ಕೆಳಗಡೆ ಇದ್ದರಿಂದ ಜನರಿಗೆ ಗೊಚರಿಸದೇ ಪ್ರಜ್ಞಾವಂತರು ಸುಶಿಕ್ಷಿತರು ನನ್ನ ಗುರುತು ಹುಡಿಕಿ ಮತ ನೀಡಿರುವುದು ದಾಖಲೆಯೇ ಸರಿ. ಕಾಂಗ್ರೆಸ್ ಪಕ್ಷದ ಅನ್ಯಾಯವನ್ನು ಸಹಿಸದೇ ನಾನು ಪಕ್ಷೇತರರಾಗಿ ಸ್ಪರ್ಧಿಸಿದರೂ 25000ಕ್ಕೂ ಅಧಿಕ ಜನ ತಮ್ಮ ಬೆಂಬಲ ನೀಡಿದ್ದು ಅವರಿಗೆ ಎಂದಿಗೂ ಚಿರಋಣಿಯಾಗಿದ್ದೇನೆ. ಕಿತ್ತೂರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದರೆ ತೀವ್ರಪೈಪೋಟಿ ನೀಡುವ ಸಮರ್ಥ ನಾಯಕನಾಗಿರುತ್ತಿದೆ. ಪಕ್ಷದ ಹಿರಿಯ ನಾಯಕರ ತಪ್ಪು ನಿರ್ಧಾರದಿಂದ ಇಂದು ಕಾಗ್ರೆಸ್ ಪಕ್ಷ ಕಿತ್ತೂರಿನಲ್ಲಿ ಹೀನಾಯವಾಗಿ ಸೋಲನುಭವಿಸಲು ಕಾರಣವಾಗದೆ ಎಂದರು.
ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದನ್ನು ಅರೆತು ನನ್ನ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತ ಯಾವದೇ ಹಣ ಮದ್ಯಕ್ಕೆ ಬೆಲೆ ಕೊಡದೆ ಹಗಲಿರುಳು ಪ್ರಾಮಾಣಿಕವಾಗಿ ದುಡಿದ್ದಿದ್ದಾರೆ. ನನ್ನ ನಂಬಿದ ಜನತೆಗಾಗಿ ಅವರ ಕಷ್ಠಗಳಿಗೆ ಸ್ಪಂದಿಸಲು ಮತ್ತೆ ಎಂದಿನಂತೆ ಸಮಾಜ ಸೇವೆಕನಾಗಿ ಅವರೊಂದಿಗೆ ಇರುತ್ತೇನೆ ಎಂದರು.