ಗೋಕಾಕ:ಬಿಜೆಪಿ ಧರ್ಮ ಧರ್ಮಗಳ, ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಿದೆ : ಲಖನ್ ಜಾರಕಿಹೊಳಿ

ಬಿಜೆಪಿ ಧರ್ಮ ಧರ್ಮಗಳ, ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಿದೆ : ಲಖನ್ ಜಾರಕಿಹೊಳಿ
ಗೋಕಾಕ ಏ, 2 :- ಬಿಜೆಪಿ ಧರ್ಮ ಧರ್ಮಗಳ, ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಿದೆ. ಆದರೆ ಇತಿಹಾಸ ಹೊಂದಿರುವ ಕಾಂಗ್ರೇಸ್ ಪಕ್ಷ ಜಾತಿ ರಾಜಕಾರಣ ಮಾಡದೇ ಎಲ್ಲ ಧರ್ಮಗಳನ್ನು ಗೌರವಿಸಿ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಸಮಾನತೆಯಿಂದ ಶ್ರಮಿಸುತ್ತಿದೆ ಎಂದು ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.
ಅವರು, ಇಲ್ಲಿಯ ಮಹಾಲಿಂಗೇಶ್ವರ ನಗರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರ ಮತಯಾಚನೆ ಮಾಡುತ್ತ ಮಾತನಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತ್ರತ್ವದ ಕಾಂಗಗ್ರೇಸ್ ಸರಕಾರ ನುಡಿದಂತೆ ನಡೆದು ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ರಾಜ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರು ನಗರ ಹಾಗೂ ಗ್ರಾಮಗಳ ಅಭಿವೃದ್ಧಿಗೆ ನಿಮ್ಮೆಲ್ಲರ ಆಶೀರ್ವಾದದಿಂದ ಶ್ರಮಿಸುತ್ತಿದ್ದಾರೆ.
ಜನತೆಯೇ ನಮ್ಮ ರಾಜಕೀಯ ಶಕ್ತಿಯಾಗಿದ್ದು. ನಿಮ್ಮ ಆಶೀರ್ವಾದದಿಂದಲೇ ನಾವು ರಾಜಕೀಯವಾಗಿ ಬೆಳೆಯುತ್ತಿದ್ದೇವೆ. ಕಳೆದ ನಾಲ್ಕು ಬಾರಿ ಆಶೀರ್ವದಿಸಿದಂತೆ ಈ ಬಾರಿಯೂ ರಮೇಶ ಜಾರಕಿಹೊಳಿ ಅವರಿಗೆ ಆಶೀರ್ವಧಿಸಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಸದಸ್ಯರಾದ ಎಸ್ ಎ ಕೋತವಾಲ, ವನಶ್ರೀ ಸಾಯನ್ನವರ, ಎಪಿಎಮ್‍ಸಿ ನಿರ್ದೇಶಕ ಬಸವರಾಜ ಸಾಯನ್ನವರ ಸೇರಿದಂತೆ ಮಹಾಲಿಂಗೇಶ್ವರ ನಗರದ ಹಿರಿಯರು, ಪ್ರಮುಖರು, ಕಾಂಗ್ರೇಸನ ನೂರಾರು ಕಾರ್ಯಕರ್ತರು ಇದ್ದರು.