ಗೋಕಾಕ:ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೆ ಹೆಚ್ಚಿನ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ : ಸಚಿವ ರಮೇಶ

ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೆ ಹೆಚ್ಚಿನ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ : ಸಚಿವ ರಮೇಶ
ಗೋಕಾಕ ಮೇ 1 : ಗೋಕಾಕ ಮತಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ, ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿರುವದಾಗಿ ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಗರದ ಹುಡ್ಕೊ ಕಾಲೊನಿ, ಗಣೇಶ ನಗರ, ಹಮಾಲರ ಕಾಲೊನಿ, ಅಡಿಬಟ್ಟಿ ಕಾಲೊನಿಗಳಲ್ಲಿ ಮತಯಾಚನೆ ಮಾಡುತ್ತ ಮಾತನಾಡಿದರು.
ನಗರದಲ್ಲಿ ಕುಡಿಯುವ ನೀರು, ರಸ್ತೆ ಅಗಲೀಕರಣ ಸೇರಿದಂತೆ ಹಲವಾರು ಯೋಜನೆಗಳ ಅನುಷ್ಠಾನದಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದು ಅವುಗಳ ಕಾಮಗಾರಿ ಪ್ರಗತಿಯಲ್ಲಿವೆ. ನಮ್ಮ ಅಧಿಕಾರ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ತಮ್ಮ ಕಣ್ಣು ಮುಂದೆ ಇದೆ. ವಿರೋಧಿಗಳು ಮಾಡುತ್ತಿರುವ ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೆ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಆಶೀರ್ವದಿಸುವಂತೆ ಕೋರಿದರು.
ಕಳೆದ ನಾಲ್ಕು ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ, ಸಚಿವನಾಗಿ ಜನಸೇವೆ ಮಾಡುತ್ತಿದ್ದೆನೆ. ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಸ್.ಎ.ಕೋತವಾಲ, ಬಾಬು ಶೇಖಬಡೆ, ಭಗವಂತ ಹುಳ್ಳಿ, ಭೀಮಶಿ ಭರಮನ್ನವರ, ಚಂದ್ರಕಾಂತ ಇಳಿಗೇರ, ಜಯಾನಂದ ಹುಣಶ್ಯಾಳ, ಕಾಂಗ್ರೇಸ್ ನಗರ ಘಟಕದ ಅಧ್ಯಕ್ಷ ನಜೀರ ಶೇಖ, ಮುಖಂಡರಾದ ಅಬ್ಬಾಸ ದೇಸಾಯಿ, ಪಾಂಡು ಮನ್ನಿಕೇರಿ, ಶ್ರೀಧರ ಮುತಾಲಿಕ ದೇಸಾಯಿ, ಡಾ|| ಹಳಿಗೌಡರ, ಅಶೋಕ ಬಳಿಗಾರ, ಝಂವಾರ, ಜರತಾರಕರ, ಎಮ್ ಎನ್ ಶಿರೋಳ, ಶಶಿ ಕನ್ನಪ್ಪನವರ, ಲಕ್ಷ್ಮಣ ಸಂಕಪಾಳೆ, ನಾಗಪ್ಪ ಮಾಳೇದಾರ, ನಿರುಪಾಧಿ ಶಿರೋಳ, ರಮೇಶ ಬೊಸ್ಲೆ, ಮಾರುತಿ ತೋಟಗಿ ಸೇರಿದಂತೆ ಅನೇಕರು ಇದ್ದರು.