ಬೈಲಹೊಂಗಲ:ಬಿಜೆಪಿ ನಾಯಕರಿಗೆ ತೊಡೆ ತಟ್ಟಿದ ಮೆಟಗಡ್ಡ : ಬೈಲಹೊಂಗಲ ಕ್ಷೇತ್ರದಿಂದ ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ

ಬಿಜೆಪಿ ನಾಯಕರಿಗೆ ತೊಡೆ ತಟ್ಟಿದ ಮೆಟಗಡ್ಡ : ಬೈಲಹೊಂಗಲ ಕ್ಷೇತ್ರದಿಂದ ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ
ಬೈಲಹೊಂಗಲ ಏ 19: ಟಿಕೆಟ್ ತಪ್ಪಿಸಿರುವ ಬಿಜೆಪಿ ನಾಯಕರಿಗೆ ತೊಡೆ ತಟ್ಟಿರುವ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಇಂದು ಬೈಲಹೊಂಗಲ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು .
ತಮ್ಮ ಹಳೆಯ ಅಂಬಾಸಿಡರ್ ಕಾರಲ್ಲಿ ಐವರು ಬೆಂಬಲಿಗರೊಂದಿಗೆ ಆಗಮಿಸಿದ ಜಗದೀಶ ಮೆಟಗುಡ್ಡ ಚುನಾವಣಾ ಅಧಿಕಾರಿ ಕೆ.ದೊರೆಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಸರ್ವೆ ಪ್ರಕಾರ ನನಗೆ ಟಿಕೆಟ್ ನೀಡಬೇಕಿತ್ತು. ಸರ್ವೆ ವರದಿ ಪರಿಗಣಿಸದೇ ಕೆಜೆಪಿಯಿಂದ ಬಂದ ಡಾ. ವಿಶ್ವನಾಥ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ನಾಯಕರ ನಿರ್ಧಾರದಿಂದ ನನಗೆ ಬೇಸರವಾಗಿದೆ. ಹೀಗಾಗಿ ಪಕ್ಷೇತರನಾಗಿ ಸ್ಪರ್ದಿಸುತ್ತಿದ್ದೇನೆ. ಈ ಹಿಂದೆ ಎರಡು ಸಲ ಈ ಕ್ಷೇತ್ರದ ಜನ ಆಯ್ಕೆ ಮಾಡಿದ್ದರು. ಈ ಸಲವೂ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.