RNI NO. KARKAN/2006/27779|Thursday, July 31, 2025
You are here: Home » breaking news » ಖಾನಾಪುರ : ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ

ಖಾನಾಪುರ : ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ 

ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ

ಖಾನಾಪುರ ಮೇ 24: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ತಾಲೂಕಿನ ಕರಂಬಳದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ತಕರಾರು ಅರ್ಜಿ ನೀಡಿದ್ದಾರೆ ಎಂಬ ಕಾರಣಕ್ಕೆ ಪಾಸ್ ವಿತರಣೆ ನಿಲ್ಲಿಸಲಾಗಿದೆ. ಇದರಿಂದ ಕಟ್ಟಡ ನಿರ್ಮಾಣಕ್ಕೆ ತೊಂದರೆಯಾಗುತ್ತಿದ್ದು, ಅರ್ಜಿ ಸಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವವರ ಹೆಸರು ಬಹಿರಂಗಗೊಳಿಸಬೇಕು ಮತ್ತು ಸಾರ್ವಜನಿಕರಿಗೆ ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಮರಳು ಉದ್ದಿಮೆದಾರರು ಮಂಗಳವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಇರ್ಫಾನ್ ತಾಳಿಕೋಟಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಮರಳು ಉದ್ದಿಮೆದಾರರು, ಕರಂಬಳ ಗ್ರಾಮದ ಬಳಿ ಮರಳುಗಾರಿಕೆ ಉದ್ಯಮವನ್ನು ಕೈಗೊಳ್ಳಲು ಸ್ಥಳ ಗುರುತಿಸಿ ಈ ಸ್ಥಳದಲ್ಲಿ ತೆಗೆಯುವ ಮರಳಿಗೆ ಪಾಸ್‍ನೀಡುವ ಕೆಲಸವನ್ನು ಕೈಗೊಂಡಿದೆ. ಆದರೆ ಪಾಸ್ ವಿತರಣೆ ಮತ್ತು ನಿಗದಿತ ಸ್ಥಳದಲ್ಲಿ ಮರಳುಗಾರಿಕೆ ಕೈಗೊಂಡಿರುವ ಬಗ್ಗೆ ಮರಳು ಉದ್ಯಮದಲ್ಲಿರುವವರಿಗೆ ಸಂದೇಹವಿದ್ದು, ಮರಳುಗಾರಿಕೆ ಉದ್ಯಮವನ್ನು ಪಾರದರ್ಶಕವಾಗಿಸುವ ಮೂಲಕ ಎಲ್ಲರಿಗೂ ಒಂದೇ ಮಾದರಿಯ ನಿಯಮಗಳನ್ನು ರೂಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಕರಬಂಳ ಬಳಿ ತೆಗೆಯುವ ಮರಳಿನ ಪಾಸ್ ಬಳಸುವ ಕೆಲ ಉದ್ದಿಮೆದಾರರು ಇದೇ ಪಾಸ್ ಮೂಲಕ ಖಾಸಗಿ ಜಮೀನಿನಲ್ಲಿ ತೆಗೆಯುವ ಮರಳು ಸಾಗಿಸುತ್ತಾರೆ. ಒಂದೇ ಪಾಸ್ ಅಡಿ ಮೂರ್ನಾಲ್ಕು ಟ್ರಿಪ್ ಮರಳು ಸಾಗಿಸುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮರಳು ಉದ್ಯಮ ಕೆಲವು ಪ್ರಭಾವಿಗಳ ಕೈಗೊಂಬೆಯಾಗಿರುವ ಸಂಶಯವಿದ್ದು, ಈ ಸಂಶಯ ನಿವಾರಿಸುವ ನಿಟ್ಟಿನಲ್ಲಿ ಉದ್ಯಮದಲ್ಲಿ ಪಾರದರ್ಶಕತೆ ಅಳವಡಿಸಲು ಮನವಿಯಲ್ಲಿ ಆಗ್ರಹಿಸಲಾಯಿತು.

Related posts: