RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಕ್ಷೇತ್ರದಲ್ಲಿಯ ಜನೋಪಯೋಗಿ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ : ಶಾಸಕ ಬಾಲಚಂದ್ರ

ಗೋಕಾಕ:ಕ್ಷೇತ್ರದಲ್ಲಿಯ ಜನೋಪಯೋಗಿ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ : ಶಾಸಕ ಬಾಲಚಂದ್ರ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಲೋಳಸೂರ ಗ್ರಾಮದಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿಯ ಜನೋಪಯೋಗಿ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ : ಶಾಸಕ ಬಾಲಚಂದ್ರ

ಗೋಕಾಕ ಮಾ 24 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿನ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಮತ ಯಾಚಿಸಬೇಕು. ಕ್ಷೇತ್ರದಲ್ಲಿ ಕೈಗೊಂಡ ಜನೋಪಯೋಗಿ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಕಾರ್ಯಕರ್ತರದ್ದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮೀಪದ ಲೋಳಸೂರ ಗ್ರಾಮದಲ್ಲಿ ಬುಧವಾರದಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ಮನದಟ್ಟು ಮಾಡಿ ಪ್ರತಿ ಬೂಥ ಮಟ್ಟದಲ್ಲಿ ವ್ಯವಸ್ಥಿತವಾಗಿ ಸಂಘಟಿಸಬೇಕೆಂದು ತಿಳಿಸಿದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಪೂರ್ಣ ಬಹುಮತದೊಂದಿಗೆ ಬಿ.ಎಸ್. ಯಡಿಯೂರಪ್ಪನವರು ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಜನಪ್ರೀಯ ಯೋಜನೆಗಳಿಗಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು.
ಲೋಳಸೂರ ಗ್ರಾಮಸ್ಥರು ಮೊದಲಿನಿಂದಲೂ ನಮಗೆ ನಿಷ್ಠೆ ವ್ಯಕ್ತಪಡಿಸುತ್ತ ಬಂದಿದ್ದಾರೆ. ನಾವು ಕೂಡ ಅಷ್ಟೇ ಪ್ರೀತಿ-ವಿಶ್ವಾಸದಿಂದ ಗ್ರಾಮಸ್ಥರೊಂದಿಗೆ ನಡೆದುಕೊಳ್ಳುತ್ತ ಬರುತ್ತಿದ್ದೇವೆ. ಕಳೆದೆರಡು ದಶಕಗಳಿಂದ ಒಡನಾಟ ಹೊಂದಿರುವ ಗ್ರಾಮಸ್ಥರಿಗೆ ನಾವು ಸದಾ ಋಣಿಯಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಸತತ 5ನೇ ಬಾರಿಗೆ ಆರಿಸಿ ತಂದು ಜನಸೇವೆಗೆ ಹಾಗೂ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಡಿವೈಎಸ್‍ಪಿ ರಾಮಪ್ಪ ಬೆಣಚಿನಮರಡಿ, ಈ ಬಾರಿಯೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗ್ರಾಮಸ್ಥರಿಂದ ಅತೀ ಹೆಚ್ಚಿನ ಮತಗಳನ್ನು ನೀಡುತ್ತೇವೆ. ಎಲ್ಲರೂ ಒಂದಾಗಿ ಚುನಾವಣೆಯಲ್ಲಿ ದುಡಿಯುತ್ತೇವೆ ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷ ಯಮನಪ್ಪ ಬಾಗಾಯಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮದ ಅಭಿವೃದ್ಧಿಗೆ 2.60 ಕೋಟಿ ರೂ.ಗಳನ್ನು ವೆಚ್ಚ ಮಾಡಿ ವಿವಿಧ ಕಾಮಗಾರಿಗಳನ್ನು ನೆರವೇರಿಸಿದ್ದಾರೆ. ಇಂತಹವರು ನಮಗೆ ದೊರೆತಿರುವುದು ಭಾಗ್ಯವೆಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮ ಪಂಚಾಯತಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸತ್ಕರಿಸಿದರು.
ಮುಖಂಡರಾದ ಮನು ಗಡಾದ, ಪುಂಡಲೀಕ ಮೇಟಿ, ನಜೀರ ಮಕಾನದಾರ, ಜ್ಯೋತೆಪ್ಪ ಗಡಾದ, ರಿಯಾಜ ಮಕಾನದಾರ, ಮಾಯವ್ವ ಸಿದ್ದಪ್ಪ ನಿಡಗುಂದಿ, ಸಿದ್ದವ್ವ ಸಿದ್ದಪ್ಪ ನಿಡಗುಂದಿ, ದುಂಡವ್ವ ಮಂಟೂರ, ಕಲಾವತಿ ಬಾಗಾಯಿ, ಅಂಜುಮ್ ಖಾನ, ಕಲಗೌಡ ನಾಯಿಕ, ಮುಂತಾದವರು ಉಪಸ್ಥಿತರಿದ್ದರು.

Related posts: