ಗೋಕಾಕ: ಕೊಳವಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ
ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ
ಗೋಕಾಕ ಮಾ 7: ತಾಲೂಕಿನ ಕೊಳವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿಯಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಕಾರ್ಯಕ್ರಮದಡಿಯಲ್ಲಿ ದಿನಾಂಕ 06/03/2018ರಂದು ಗೋಕಾಕ ತಾಲೂಕಿನ ಆಯ್ದ ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕೋಡಿ ಜಿಲ್ಲಾ ಬಿಸಿಯೂಟ ಅಧಿಕಾರಿಗಳಾದ ಶ್ರೀ ಜಿ ಬಿ ಬಳೆಗಾರ ಉದ್ಘಾಟಿಸಿದರು. ಮಕ್ಕಳಲ್ಲಿ ಇಂತಹ ಕಾರ್ಯಕ್ರಮದ ಮೂಲಕ ವೈಜ್ಞಾನಿಕ ಮನೋಭಾವನೆ ಮೂಡಿಸಿ ಮಕ್ಕಳು ಭವಿಷ್ಯದ ವಿಜ್ಞಾನಿಗಳಾನ್ನಾಗಿ ರೂಪಿಸಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು. ಕೊಳವಿ ಗ್ರಾಮ ಪಂಚಾಯತ ಅಧ್ಯಕ್ಷರು, ತಾಲೂಕ ಪಂಚಾಯತ ಸದಸ್ಯರು, ಎಸ್ ಡಿ ಎಮ್ ಸಿ ಸದಸ್ಯರು, ಬಿ ಆರ್ ಪಿ ಶ್ರೀ ಬಿ ಎನ್ ಮಾಟೋಳ್ಳಿ, ತಾಲೂಕಿನ ಎಲ್ಲಾ ಕ್ಲಸ್ಟರ ಸಿ ಆರ್ ಪಿಗಳು ಅತಿಥಿಗಳಾಗಿ ಭಾಗವಹಿಸಿದ್ದರು. 16 ಶಾಲೆಗಳ ಮಕ್ಕಳು ತಯಾರಿಸಿದ ವಿಜ್ಞಾ£ದÀ ವಿವಿಧ ಮಾದರಿಗಳ ಪ್ರದರ್ಶನ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಡಕಲಕಟ್ಟಿ ಪ್ರಥಮ ಸ್ಥಾನ, ಕೊಳವಿ ಶಾಲೆ ದ್ವಿತೀಯ ಹಾಗೂ ಮಾಲದಿನ್ನಿ ಶಾಲೆ ತೃತೀಯ ಸ್ಥಾನ ಪಡೆಯಿತು. ಶ್ರೀ ಮೆಳವಂಕಿ ಗುರುಗಳು ಎಲ್ಲರನ್ನು ಸ್ವಾಗತಿಸಿದರು.