ಗೋಕಾಕ:ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ಓರ್ವನ ಸಾವು ಗೋಕಾಕ ಫಾಲ್ಸ ರಸ್ತೆಯಲ್ಲಿ ಘಟನೆ
ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ಓರ್ವನ ಸಾವು ಗೋಕಾಕ ಫಾಲ್ಸ ರಸ್ತೆಯಲ್ಲಿ ಘಟನೆ
ಗೋಕಾಕ ಜ 20: ಅತಿ ವೇಗದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಗೋಕಾಕ ಪಾಲ್ಸ ರಸ್ತೆಯಲ್ಲಿ ಇಂದು ಮದ್ಯಾಹ್ನ ನಡೆದಿದೆ
ಗುರುಪುತ್ರ ಬಸಪ್ಪಾ ಹುದಲಿ(48) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು ಗಂಭೀರವಾಗಿ ಗಾಯಾಗೊಂಡಿರುವ ಇನ್ನಿಬ್ಬರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ
ಈ ಕುರಿತು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
