ಗೋಕಾಕ:ಪಂಚಾಯತ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ
ಪಂಚಾಯತ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ
ಗೋಕಾಕ ಜ 19: ಹೊಸದಾಗಿ ರಚನೆಯಾದ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಯಿಂದ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ 30 ಕ್ಕೂ ಹೆಚ್ಚು ಸಿಬ್ಬಂದಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎರಡು ಪ್ರತ್ಯೇಕ ಮನವಿಗಳನ್ನು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರಿಗೆ ಶುಕ್ರವಾರ ಸಲ್ಲಿಸಿದರು.
ಮಲ್ಲಾಪೂರ ಪಿ.ಜಿ ಗ್ರಾಮ ಪಂಚಾಯತವನ್ನು ಪಟ್ಟಣ ಪಂಚಾಯತನ್ನಾಗಿ ಮೇಲ್ದರ್ಜೇಗೇರಿಸಲಾಗಿದೆ. 23 ಕ್ಕೂ ಹೆಚ್ಚು ಜನ ಡಿ ಗ್ರೂಫ್ ನೌಕರರು ಪಟ್ಟಣ ಪಂಚಾಯಯತಿಯಲ್ಲಿ ಗ್ರಾಮ ಪಂಚಾಯತಿಯಿಂದ ಮುಂದುವರೆದ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದೇವೆ. ನಾವೂ ಗ್ರಾಮ ಪಂಚಾಯತ ಅವದಿಯಿಂದ ಇಲ್ಲಿಯವರೆಗೆ ದಿನಗೂಲಿ ಆಧಾರದ ಮೇಲೆ ನೇಮಕವಾಗಿ ಸುಮಾರು 7-15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುತ್ತೇವೆ. ಆದರೆ ಪೌರಾಡಳಿತ ನಿರ್ದೇಶನಾಲಯದ ದಿ.07-08-2017 ರ ಆದೇಶ ಪ್ರಕಾರ ನಮ್ಮನ್ನು ಮತ್ತೊಮ್ಮೆ ನೇರ ನೇಮಕಾತಿ ಮಾಡಿಕೊಂಡು ನಮಗೆ ಸಂಭಾವನೆಯನ್ನು ನೇರವಾಗಿ ನೀಡಬೇಕೆಂದು ಹೇಳಲಾಗಿದೆ.
ಆದರೆ ಸದರಿ ಆದೇಶದಂತೆ ನಾವು ಈ ಹಿಂದೆ ಸಲ್ಲಿಸಿದ 15 ವರ್ಷಗಳ ಸೇವೆ ವ್ಯರ್ಥವಾಗುತ್ತದೆ. ಇದರಿಂದ ನಾವು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಮ್ಮ ಸಂಪೂರ್ಣ ಸೇವಾ ಅವಧಿಯನ್ನು ಪರಿಗಣಿಸಿ ನಮ್ಮನ್ನು ಖಾಯಂ ಪೌರ ಕಾರ್ಮಿಕರೆಂದು ನೇಕಮಗೊಳಿಸಬೇಕೆಂದು ಮನವಿಯಲ್ಲಿ ಡಿ ಗ್ರೂಫ್ ನೌಕರರು ಆಗ್ರಹಿಸಿದ್ದಾರೆ.
ಮತ್ತೊಂದು ಮನವಿಯಲ್ಲಿ 7 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಇನ್ನೂ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ದೊರಕಿಲ್ಲ. ನವೆಂಬರ್ 2017 ರಿಂದ ಎಪ್.ಬಿ.ಎ.ಎಸ್, ನಲ್ಲಿ ಅನುಮೋದನೆಯಾದಂತ ಸಿಬ್ಬಂದಿಗಳಿಗೆ ಮಾತ್ರ ವೇತನ ಪಡೆಯಲು ಅವಕಾಶವಿರುವುದರಿಂದ ನಮ್ಮ ವೇತನವನ್ನು ನವೆಂಬರ್ 2017 ರಿಂದ ತಡೆಹಿಡಿಯಲಾಗಿದೆ. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಸರ್ಕಾರ ಕೂಡಲೇ ನಮಗೂ ಸರ್ಕಾರಿ ನೌಕರರೆಂದು ಪರಿಗಣಿಸಿ ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಿ.ಎಂ.ದಳವಾಯಿ, ಆರ್.ಜಿ.ತಂಗೆವ್ವಗೋಳ, ಆರ್. ಎನ್.ಸದಲಗಿ, ಆರ್. ಎಚ್. ಬೆಲ್ಲದ, ಎ.ಬಿ. ಬಡಾಯಿ, ಎಸ್. ವಾಯ್. ಮಾದರ, ಯು. ಎ. ಪವಾರ, ಎಮ್. ಆಯ್. ಮಕಾನದಾರ, ಸುರೇಶ ಪೂಜಾರಿ, ಕೆಂಪಣ್ಣಾ ಚೌಕಶಿ, ಮಲ್ಲು ಕೋಳಿ, ರಮೇಶ ತುಕ್ಕಾನಟ್ಟಿ, ಲಕ್ಷ್ಮಣ ಹುಣಶ್ಯಾಳ ಸೇರಿದಂತೆ ಮಲ್ಲಾಪೂರ ಪಿ.ಜಿ ಪ.ಪಂ ಕಾರ್ಮಿಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.