RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಕೌಜಲಗಿ ತಾಲೂಕಾ ಕೇಂದ್ರಕ್ಕೆ ಹೊಸಮನಿ ಆಗ್ರಹ

ಗೋಕಾಕ:ಕೌಜಲಗಿ ತಾಲೂಕಾ ಕೇಂದ್ರಕ್ಕೆ ಹೊಸಮನಿ ಆಗ್ರಹ 

ಕೌಜಲಗಿ ತಾಲೂಕಾ ಕೇಂದ್ರಕ್ಕೆ ಹೊಸಮನಿ ಆಗ್ರಹ

ಗೋಕಾಕ ಡಿ 30: ಕಳೆದ 3-4 ದಶಕಗಳಿಂದ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗೂ ಮನವಿಗಳನ್ನು ಸಲ್ಲಿಸಿದರೂ ಕೂಡಾ ಇನ್ನುವರೆಗೆ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು, ಸರ್ಕಾರ ಇದರಲ್ಲಿ ಯಾವುದೇ ರಾಜಕೀಯ ಮಾಡದೇ ಪಕ್ಷಾತೀತವಾಗಿ ಇಲ್ಲಿಯ ಜನರ ಭಾವನೆಗಳಿಗೆ ಸ್ಪಂದಿಸಿ ಈ ಭಾಗದ ಅಭಿವೃದ್ದಿಗಾಗಿ ಶೀಘ್ರದಲ್ಲಿಯೇ ಕೌಜಲಗಿಯನ್ನು ತಾಲೂಕಾಗಿ ಘೋಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಕೌಜಲಗಿಯನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಯಬೇಕೆಂದು ತಿಳಿಸಿದ್ದಾರೆ.

Related posts: