RNI NO. KARKAN/2006/27779|Wednesday, July 16, 2025
You are here: Home » breaking news » ಬೆಳಗಾವಿ :10ನೇ ಸತೀಶ ಶುರ್ಗಸ್ ಕ್ಲಾಸಿಕ್ : ರಾಷ್ಟ್ರೀಯ ಮಟ್ಟದ ಅಂಗವಿಕಲ ವಿಭಾಗದ ಚಾಂಪಿಯನಯಾಗಿ ಮಹಾ ರಾಜ್ಯದ ರವೀಂದ್ರ ಕದಂ ಆಯ್ಕೆ

ಬೆಳಗಾವಿ :10ನೇ ಸತೀಶ ಶುರ್ಗಸ್ ಕ್ಲಾಸಿಕ್ : ರಾಷ್ಟ್ರೀಯ ಮಟ್ಟದ ಅಂಗವಿಕಲ ವಿಭಾಗದ ಚಾಂಪಿಯನಯಾಗಿ ಮಹಾ ರಾಜ್ಯದ ರವೀಂದ್ರ ಕದಂ ಆಯ್ಕೆ 

10ನೇ ಸತೀಶ ಶುರ್ಗಸ್ ಕ್ಲಾಸಿಕ್ : ರಾಷ್ಟ್ರೀಯ ಮಟ್ಟದ ಅಂಗವಿಕಲ ವಿಭಾಗದ ಚಾಂಪಿಯನಯಾಗಿ ಮಹಾ ರಾಜ್ಯದ ರವೀಂದ್ರ ಕದಂ ಆಯ್ಕೆ

ಬೆಳಗಾವಿ ಡಿ 16 : ಕಳೆದ ಎರಡು ದಿನಗಳಿಂದ ಬೆಳಗಾವಿ ಮಹಾ ನಗರದಲ್ಲಿ ಸತೀಶ ಶುರ್ಗಸ ಪೌಂಡೇಶನ ಆಶ್ರಯದಲ್ಲಿ ನಡೆಯುತ್ತಿರುವ 10ನೇ ಸತೀಶ ಶುರ್ಗಸ್ ಕ್ಲಾಸಿಕ್ ಸ್ವರ್ಧೆಯಲ್ಲಿ ಇಂದು ಸಾಯಂಕಾಲ ನಡೆದ ರಾಷ್ಟ್ರೀಯ ಮಟ್ಟದ ಅಂಗವಿಕಲ ವಿಭಾಗದ ಧೇಹದ್ಯಾರ್ಡ ಸ್ವರ್ಧೆಯಲ್ಲಿ ಚಾಂಪಿಯನಯಾಗಿ ಮಹಾ ರಾಜ್ಯದ ರಾಜ್ಯದ ರವೀಂದ್ರ ಕದಂ ಅವರು ಆಯ್ಕೆಯಾದರು .

ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ 10ನೇ ಸತೀಶ ಶುರ್ಗಸ್ ಕ್ಲಾಸಿಕ್ ರಾಷ್ಟ್ರೀಯ ಮಟ್ಟದ ಅಂಗವಿಕಲ ವಿಭಾಗದ ಸ್ವರ್ಧೆಯಲ್ಲಿ ವಿಜೇತನಾದ ಸ್ವರ್ದಾಳು ನಗದು 1,00,000 ರೂ ಮತ್ತು ಆರ್ಕಷಕ ಟ್ರೋಫಿ ಪಡೆದು ಕೊಂಡರು

ದ್ವಿತೀಯ ಸ್ಥಾನವನ್ನು ಆಂದ್ರ ಪ್ರದೇಶದ ಬಿ .ಕೋಟೇಶ್ವರ ರಾವ್ ನಗದು 75,000 ರೂ ಮತ್ತು ಟ್ರೋಫಿ , ತೃತೀಯ ಸ್ಥಾನವನ್ನು ಮಹಾ ರಾಜ್ಯದ ಇಂದರ ಪ್ರಕಾಶ ರಾವ್ ನಗದು 50,000 .ರೂ ಮತ್ತು ಟ್ರೋಫಿ , ಚರ್ತುಥ ಸ್ಥಾನವನ್ನು ಮಧ್ಯ ಪ್ರದೇಶದ ರೇಯಾನ ಖಾನ ನಗದು .25,000 .. ರೂ ಮತ್ತು ಟ್ರೋಪಿ ಐದನೇಯ ಸ್ಥಾನವನ್ನು ಪಂಜಾಬ್ ರಾಜ್ಯದ ಬಿಕ್ರಂಜೀತ ಸಿಂಗ ನಗದು 15,000 ರೂ ಮತ್ತು ಪ್ರಶಸ್ತಿ ಪತ್ರ ಪಡೆದು ಕೊಂಡರು

ಇನ್ನೂಳಿದ ಐದು ಸ್ವರ್ಧಾಳು ಕ್ರಮವಾಗಿ 10,000 ರೂ ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದರು

ಈ ಸಂದರ್ಭದಲ್ಲಿ ರಾಹುಲ್ ಜಾರಕಿಹೊಳಿ , ಪ್ರೇಮಚಂದ ಡೇಂಗ್ರಾ , ಚೇತನ ಫಟಾರೇ , ಸುನೀಲ ಅಫಟೇಕರ , ಅಜೀತ ಸಿದ್ದಣನ್ನವರ , ಸಂಜು ದೇವರಮನಿ , ಲಕ್ಷ್ಮಣ ತೋಟಗಿ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು

Related posts: