RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ: ಹಳ್ಳ ಹಿಡಿಯುತ್ತಿದೆಯಾ ? ಗೋಕಾಕ ಜಿಲ್ಲಾ ಹೋರಾಟ

ಗೋಕಾಕ: ಹಳ್ಳ ಹಿಡಿಯುತ್ತಿದೆಯಾ ? ಗೋಕಾಕ ಜಿಲ್ಲಾ ಹೋರಾಟ 

ಹಳ್ಳ ಹಿಡಿಯುತ್ತಿದೆಯಾ ? ಗೋಕಾಕ ಜಿಲ್ಲಾ ಹೋರಾಟ
ವಿಶೇಷ ವರದಿ :ಸಾಧಿಕ ಹಲ್ಯಾಳ :

ಕಳೆದ ಹಲವು ವರ್ಷಗಳಿಂದಲು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆಯನ್ನಾಗಿಸಬೇಕೆಂದು ಹೋರಾಟಗಳು ನಡೆಯುತ್ತಲೆ ಇವೆ ಆದರೆ ದಿವಂಗತ ಜಿ.ಎಚ್.ಪಟೇಲರ ಸರಕಾರ ಒಂದನ್ನು ಬಿಟ್ಟು ಇಲ್ಲಿಯವರೆಗೆ ರಾಜ್ಯವನ್ನಾಳಿದ ಯಾವೊಂದು ಸರಕಾರಗಳು ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಒಮ್ಮತದ ನಿರ್ಧಾರಕ್ಕೆ ಬರದಿಲ್ಲದಿರುವದು ಸಹಜವಾಗಿ ಹೋರಾಟಗಾರರಲ್ಲಿ ಆಕ್ರೋಶವನ್ನು ಹುಟ್ಟಿಸಿದೆ.

ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಗೋಕಾಕ ನಗರದ ಜಿಲ್ಲಾ ಸ್ಥಾನಕ್ಕೆ ಸೂಕ್ತವೆಂದು ಸರಕಾರಗಳೇ ನೇಮಿಸಿದ ಗದ್ದಿಗೌಡರ, ವಾಸುದೇವ, ಮತ್ತು ಹುಂಡೇಕರ ಸಮೀತಿಗಳು ಸರಕಾರಕ್ಕೆ ವರದಿಗಳನ್ನು ಸಲ್ಲಿಸಿ ಹಲವು ದಶಕಗಳ ಹಿಂದೆಯೇ ವರದಿಯಗಳನ್ನು ನೀಡಿವೆ. ಆದರೆ ಈ ಮೂರು ವರದಿಗಳನ್ನು ಸರಕಾರಗಳು ಇಲ್ಲಿಯವರೆಗೆ ಪರಿಗಣಿಸದಿರವದು ಗೋಕಾಕ ತಾಲೂಕಿನ ದುರದೈವ ಎಂದರೆ ತಪ್ಪಾಗುವದಿಲ್ಲ. ಯಾವಾಗ್ಯಾವಾಗ ಜಿಲ್ಲಾ ವಿಭಜಣೆ ಪ್ರಸ್ತಾಪಗಳು ಕೇಳಿ ಬಂದಿದೆಯೋ ಆವಾಗ ಆವಾಗ ಗೋಕಾಕ ಜನರು ವರದಿಗಳನ್ನು ಆಧರಿಸಿ ನಮಗೆ ಜಿಲ್ಲಾ ನಮಗೆ ಸ್ಥಾನ ಮಾನ ನೀಡಬೇಕೆಂದು ಆಗ್ರಹಿಸಿದರೆ ಚಿಕ್ಕೋಡಿಯವರು ಈಗಾಗಲೇಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸ್ಥಾನ ಮಾನ ಪಡೆದಿದೆ. ಇಲ್ಲಿ ಉನ್ನತ ಮಟ್ಟದ ಸರಕಾರಿ ಕಚೇರಿಗಳು ಇವೆ ಇದೇ ಸ್ಥಾನ ಜಿಲ್ಲೆಯಾಗಲು ಸೂಕ್ತ , ಚಿಕ್ಕೋಡಿಯನ್ನೆ ನೂತನ ಜಿಲ್ಲೆ ಮಾಡಬೇಕೆಂದು ಹೋರಾಟಗಳನ್ನು ಕೈಗೊಂಡಿವೆ. ಈ ಇಬ್ಬರ ಬೇಡಿಕೆಗಳು ನ್ಯಾಯ ಸಮ್ಮತವಾದವುಗಳೇ ಯಾದರು ಸಹ ಇವುಗಳನ್ನು ಬೈಲಹೊಂಗಲ ಮತ್ತು ಬೆಳಗಾವಿ ಹೋರಾಟಗಾರರು ವಿರೋಧಿಸುತ್ತಾ ಬಂದು ಬೆಳಗಾವಿ ಜಿಲ್ಲೆಯನ್ನು ವಿಭಜಸಲೇ ಬಾರದೆಂದು ಆಗ್ರಹಿಸುತ್ತಲೇ ಬಂದಿವೆ. ಹೀಗಾಗಿ ಆಯಾ ಕಾಲಕ್ಕೆ ರಾಜ್ಯವನ್ನು ಆಳಿದ ಸರಕಾರಗಳು ಬೆಳಗಾವಿ ಜಿಲ್ಲಾ ವಿಭಜನೆ ವಿಷಯವನ್ನು ಕೆನಕುವ ಗೋಜಿಗೆ ಹೋಗಿಲ್ಲ ಕೆಲವೊಂದು ಸಂದರ್ಭಗಳಲ್ಲಿ ಕೆಲವರನ್ನು ಒಲೈಸಲು ಸರಕಾರಗಳು ಪ್ರಯತ್ನ ಪಟ್ಟರು ಉಗ್ರ ಹೋರಾಟಗಳನ್ನು ಎದುರಿಸಿ ತಮ್ಮ ಹೇಳಿಕೆಗಳನ್ನು ಬದಲಿಸಿದ ಮತ್ತು ಪ್ರಯತ್ನಗಳನ್ನು ಕೈಬಿಟ್ಟ ಸನ್ನಿವೇಶಗಳು ನಡೆದಿದೆ. ಎಂಬುವುದನ್ನು ಬೆಳಗಾವಿ ಜಿಲ್ಲೆಯ ಜನ ಚನ್ನಾಗಿ ಬಲ್ಲರು

ಕಳೆದ ಹಲವು ದಿನಗಳಿಂದ ಬೆಳಗಾವಿ ಜಿಲ್ಲೆ ವಿಭಜಿಸುವದಾದರೆ ಅಭಿವೃದ್ಧಿ ದೃಷ್ಟಿಯಿಂದ ಗೋಕಾಕ ಮತ್ತು ಚಿಕ್ಕೋಡಿ ತಾಲೂಕುಗಳನ್ನು ಜಿಲ್ಲೆಯಂದು ಘೋಷಿಸಬೇಕೆಂದು ಹೋರಾಟಗಳು ನಡೆದಿವೆ.

ಚಿಕ್ಕೋಡಿಯವರು ಗೋಕಾಕ ಮತ್ತು ಚಿಕ್ಕೋಡಿ ಎರಡು ತಾಲೂಕುಗಳನ್ನು ನೂತನ ಜಿಲ್ಲೆ ಮಾಡಿ ಎಂದರೆ ಗೋಕಾಕಿನ ಜನತೆಯು ಸಹ ಜಿಲ್ಲೆ ವಿಭಜಿಸುವದಾದರೆ ಚಿಕ್ಕೋಡಿ ಮತ್ತು ಗೋಕಾಕ ಎರಡು ಒಟ್ಟಿಗೆ ನೂತನ ಜಿಲ್ಲೆಗಳನ್ನಾಗಿ ಘೋಷಿಸಿ ಎಂದು ಒತ್ತಾಯ ಮಾಡುತ್ತಿವೆ.
ಮೊನ್ನೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಕಾಂಗ್ರೇಸ್ ಸರ್ಕಾರದ ಕೊನೆಯ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿಯೇ ಠಿಕಾಣಿ ಹೂಡಿದ್ದ ಸಿದ್ದರಾಮಯ್ಯನವರು ಬೆಳಗಾವಿ ಜಿಲ್ಲೆ ವಿಭಜನೆ ಮಾಡಲು ಒಲುವ ತೋರಿದ ಹೇಳಿಕೆ ನೀಡಿದ್ದರಿಂದ ಮತ್ತೆ ಜಿಲ್ಲಾ ಹೋರಾಟದ ಕಿಚ್ಚು ಚಿಕ್ಕೋಡಿ ಗೋಕಾಕಗಳಲ್ಲಿ ಹೊತ್ತುಕೊಂಡಿದೆ. ಚಿಕ್ಕೋಡಿ ಮತ್ತು ಗೋಕಾಕ ಜನರು ತಮ್ಮ ತಮ್ಮ ತಾಲೂಕುಗಳು ಜಿಲ್ಲೆಯಾಗಲೇಬೇಕೆಂಬ ಕಠೋರ ನಿಲುವುಗಳನ್ನು ತಾಳಿ ಹೋರಟಾಕ್ಕೆ ಇಳಿದರೆ ಬೆಳಗಾವಿ ಕನ್ನಡ ಪರ ಸಂಘಟನೆಗಳು ಈಗಾಗಲೇ ಸಭೆ ನಡೆಸಿ ಗಡಿ ವಿಚಾರ ಬಗೆಹರಿಯುವ ವರೆಗೆ ಜಿಲ್ಲಾ ವಿಭಜಣೆ ಮಾಡಬಾರದು ಎಂಬ ನಿಲುವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ .

ಇದರಿಂದ ಜಿಲ್ಲಾ ಹೋರಾಟದ ಸ್ಥಿತಿ ಈಗ ಪ್ರಸ್ತುತ ತ್ರಿ ಶಂಕು ಪರಿಸ್ಥಿತಿ ಯಲ್ಲಿ ಸಿಲುಕಿದಂತಾಗಿದೆ. ಇದು ಇಡಿ ಜಿಲ್ಲೆಯ ವಾಸ್ತು ಸ್ಥಿತಿಯಾದರೆ ಗೋಕಾಕಿನ ಕಥೆಯೇ ಬೇರೆಯಾಗಿದೆ. ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ದಿ. ನಿಂಗಯ್ಯಾ ಸ್ವಾಮಿ ಪೂಜಾರಿಯವರ ಕಾಲದಿಂದಲೂ ಅವರ ನೇತೃತ್ವದಲ್ಲಿ ಹೋರಾಟಗಳು ನಡೆದಿವೆ. ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಹೋರಾಟ ಸಮಿತಿ ರಚಿಸಿ ಹಲವಾರು ಹೋರಾಟಗಳು ನಡೆದಿವೆ. ಅದರಲ್ಲಿ ಕೆಲವೊಂದು ಹೊರಾಟಗಳು ಉಗ್ರ ಸ್ವರೂಪವನ್ನು ಪಡೆದು ಸರಕಾರಿನ ಚಿತ್ತ ಗೋಕಾಕಿನತ್ತ ಮಾಡಲು ಮುನ್ನುಡಿ ಬರೆದಿವೆ . ತದನಂತರ ಈ ಹೋರಾಟ ಸಮಿತಿ ಹಸ್ತಾಂತರ ಗೊಂಡು ಮಾಜಿ ನಗರಾಧ್ಯಕ್ಷ ದಿ. ಶಂಕರ ಮಗೆನ್ನವರ ಅವರ ಅಧ್ಯಕ್ಷತೆಯಲ್ಲಿ ಹಲವಾರು ವರ್ಷಗಳ ಕಾಲ ನೂತನ ಜಿಲ್ಲೆಗೆ ಆಗ್ರಹಿಸಿ ಅನೇಕ ಹೋರಾಟಗಳು ನಡೆದಿವೆ. ತದನಂತರ ಕಲ್ಲೋಳ್ಳಿಯ ಬಸನಗೌಡ ಪಾಟೀಲ ಈ ಹೋರಾಟ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಕೊಂಡರು ಅವರಿಗೆ ಜೊತೆಗೊಂಡು ಡಾ|| ರಾಜೇಂದ್ರ ಸಣ್ಣಕ್ಕಿ, ಹಿರಿಯ ಪತ್ರಕರ್ತ ಮುನ್ನಾ ಬಾಗವಾನ ಕಾರ್ಯದರ್ಶಿಯಾಗಿ ನೇಮಕೊಂಡು ಹಲವು ಉಗ್ರ ಸ್ವರೂಪ ಹೋರಾಟಗಳನ್ನು ಕೈಗೊಂಡು ಜಿಲ್ಲೆ ಹೊರಾಟವನ್ನು ಜೀವಂತವಾಗಿಟ್ಟು ಮಾಜಿ ಸಚಿವ ಅರಬಾಂವಿ ಶಾಸಕರ ನೇತೃತ್ವದಲ್ಲಿ ಹಲವು ಬಾರಿ ಮುಖ್ಯ ಮಂತ್ರಿಗಳ ಬಳಿ ನಿಯೋಗ ಹೋಗಿ ಆಶ್ವಾಸನೆಗಳನ್ನು ಪಡೆದು ಕೊಂಡಿವೆ ನಿಷ್ಪಕ್ಷಪಾತವಾಗಿ ನಡೆಯುತ್ತಿರುವ ಅಂದಿನ ಹೋರಾಟಗಳಲ್ಲಿ ಹೋರಾಟ ಸಮಿತಿಯಲ್ಲಿ ಎಂ.ಪಿ ಮಾಸ್ತಿಹೊಳಿ , ಶಿವಾನಂದ ಹತ್ತಿ , ಅಶೋಕ ಓಸ್ವಾಲ್ ಡಾ. ಸೂರ್ಯವಂಶಿ , ದಿ. ರಾಜು ಕಲ್ಯಾಣಶೆಟ್ಟಿ ಎಸ್.ಎಸ್. ಹತ್ತಿಕಟಗಿ, ಮಾಜಿ ಶಾಸಕ ಚಂದ್ರಶೇಖರ ನಾಯ್ಕ, ಚಂದ್ರಶೇಖರ ಕೊಣ್ಣೂರ, ಒಳಗೊಂಡಂತೆ ಹಲವಾರು ಜನ ಪ್ರತಿನಿಧಿಗಳು ಪಕ್ಷಬೇದ ಮರೆತು ಒಗ್ಗಾಟ್ಟಾಗಿ ಜಿಲ್ಲಾ ಹೋರಾಟವನ್ನು ಬಲಿಷ್ಠಗೊಳಿಸಿದ್ದರು

ಇವರಿಗೆ ಗೋಕಾಕ ನಾಡಿನ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಅಪೇಕ್ಷಾರ್ಹ ಬೆಂಬಲವನ್ನು ನೀಡಿ ಅವರ ಹೋರಾಟಗಳಲ್ಲಿ ಸಕ್ರೀಯವಾಗಿ ಬಾಗವಹಿಸಿದ್ದವು ಆದರೆ ಕ್ರಮೇಣ ವಾಸ್ತುಸ್ಥಿತಿ ಬದಲಾದಂತೆ ಜನರ ಮನಸ್ಥಿತಿ ಬದಲಾಗಿ ಜಿಲ್ಲಾ ಹೋರಾಟದ ಜಿಲ್ಲಾ ಹೋರಾಟವಾಗಿ ಉಳಿಯದೆ ರಾಜಕೀಯ ಪ್ರೇರಿತವಾಗಿ ಬದಲಾವಣೆಯಾಗಿ ಹೋರಾಟದ ವೇದಿಕೆ ರಾಜಕೀಯ ಕೇಸರೆರೆಚಾಟಕ್ಕೆ ವೇದಿಕೆಯಾಗ ತೋಡಗಿತು . ಇದನ್ನು ಮನಗೊಂಡ ಕೆಲ ಸಂಘಟನೆಗಳು , ಪ್ರಜ್ಞಾವಂತ ಜನರು ಜಿಲ್ಲಾ ಹೋರಾಟವನ್ನು ವಿರೋಧಿಸದೆ ದೂರ ಉಳಿಯುತ್ತಿದ್ದಾರೆ.

ಬಸನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಜಿಲ್ಲಾ ಹೋರಾಟದ ಸಮಿತಿ ತದನಂತರದಲ್ಲಿ ಸಕ್ರೀಯವಾಗಿ ಹೋರಾಟಗಳಲ್ಲಿ ತೊಡಗದೆ ನಿಷ್ಕ್ರೀಯವಾಯಿತು ಅದನ್ನೆ ಮುಂದಿಟ್ಟುಕೊಂಡು ಕೆಲ ಫಟಬದ್ಧ ಹಿತಾಸಕ್ತಿಗಳು ಹೋರಾಟ ವೇದಿಕೆಯನ್ನು ರಾಜಕೀಯ ಕೆಸರೆಚಾಟದ ವೇದಿಕೆಯಾಗಿ ಮಾಡಿಕೊಂಡಿರುವುದನ್ನು ನಾವು ಗಮನಿಸಬಹುದು.

ಮೊನ್ನೆ ನ್ಯಾಯವಾದಿಗಳ ಸಂಘಟನೆಯವರು ಸಭೆ ಸೇರಿ ನೂತನ ಜಿಲ್ಲೆಗಾಗಿ ಆಗ್ರಹಿಸಿ ಡಿ 15 ರಂದು ಗೋಕಾಕ ಬಂದ ಮತ್ತು ಡಿಸೆಂಬರ 21 ರಂದು ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲು ನಿರ್ಣಾಯ ಕೈಗೊಂಡಿದ್ದು ಸ್ವಾಗರ್ತ ಅದನ್ನು ಕೆಲ ನ್ಯಾಯವಾದಿಗಳೇ ವಿರೋಧಿಸಿ ಇದ್ದ ಅಧ್ಯಕ್ಷರನ್ನು ಬದಲಿಸಿ ಹಿರಿಯ ನ್ಯಾಯಾವಾದಿಗಳ ನೇತೃತ್ವದಲ್ಲಿ ಹೋರಾಟ ನಡೆಯಲಿ ಎಂದು ಬಹಿರಂಗವಾಗಿ ಪ್ರಕಟಣೆ ನೀಡಿದರು. ಅದನ್ನೆ ಅಸ್ತ್ರವಾಗಿ ಬಳಸಿಕೊಂಡು ಅತೃಪ್ತ ಗುಂಪೊಂದು ಮಾಜಿ ನಗರಾಧ್ಯಕ್ಷ ಎಸ್.ಎ. ಕೋತವಾಲ ಅವರನ್ನು ಮುಂದೆ ಮಾಡಿ ಮಂಗಳವಾರದೆಂದು ನಗರದ ಶೂನ್ಯ ಸಂಪಾದ ಮಠದಲ್ಲಿ ಪೂರ್ವಭಾವಿ ಸಭೆಯನ್ನು ಕರೆದಿತ್ತು .ಇದರಿಂದ ಜಿಲ್ಲಾ ಹೋರಾಟದಲ್ಲಿ ಬಿರುಕು ಬಿಟ್ಟಾಂತಾಗಿದೆ ಎಂದು ಕೆಲವರು ಭಾವಿಸಿದರೆ ಇದು ಒಮ್ಮತದ ಹೋರಾಟವಾಗದೆ ರಾಜಕೀಯ ಹೋರಾಟವಾಗಿ ಪರಿಗಣಿಸಿದೆ ಎಂದು ಕೆಲವರು ಭಾವಿಸಿ ಸಭೆಯಿಂದ ದೂರು ಉಳಿದಿದ್ದರು.

ನ್ಯಾಯವಾದಿಗಳ ಸಂಘದಲ್ಲಿ ಬಹು ಪಾಲು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದರೆ , ಎಸ್.ಎ.ಕೋತವಾಲ ಅವರ ಕರೆದ ಸಭೆಗೆ ಬಹುಪಾಲು ಕಾಂಗ್ರೇಸ್ ಬೆಂಬಲಿತ ಮತ್ತು ಜಾರಕಿಹೊಳಿ ಕುಟುಂಬದ ಬೆಂಬಲಿತ ಜನರು ಕೂಡಿರುವುದು ಈ ವಿಶೇಷವನ್ನು ಸಾಕ್ಷೀ ಕರಿಸುವಂತಿತ್ತು ಒಟ್ಟಾರೆಯಾಗಿ ಪಕ್ಷಾತೀತವಿಗಿ , ಜಾತ್ಯಾತೀತವಾಗಿ ನಡೆಯಬೇಕಿದ್ದ ಜಿಲ್ಲಾ ಹೋರಾಟ ರಾಜಕೀಯ ಕೆಸರೆಚಾಟಕ್ಕೆ ವೇದಿಕೆಯಾಗದೆ ಬಹು ದಶಕಗಳ ಹೋರಾಟವನ್ನು ಹಳ್ಳ ಹಿಡಿಸುವತ್ತ ಕರೆದು ಒಯ್ಯುತ್ತಿರುವುದು ಪ್ರಮಾಣಿಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ . ಈ ಎಲ್ಲಾ ಬೆಳವಣಿಗೆಯಿಂದ ಗೋಕಾಕ ಜಿಲ್ಲಾ ಹೋರಾಟಕ್ಕೆ ಸಂಭಂಧಿಸಿದಂತೆ ಎಲ್ಲವೂ ಸರಿಯಿಲ್ಲ ಎಂಬುವುದು ಜಗತ್ತಜಾಹೀರವಾಗಿದೆ ಇದನ್ನು ತಿದ್ದುಕೊಂಡು ಉಭಯ ಗುಂಪಿನವರು ಒಗ್ಗಟ್ಟಾಗಿ ಒಮ್ಮತದ ನಿರ್ಧಾರ ತೆಗೆದುಕೊಂಡು ಎಲ್ಲರೂ ಒಗ್ಗಟ್ಟಾಗಿ ಎಲ್ಲ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡಿದರೆ ಮಾತ್ರ ಗೋಕಾಕ ಹೊಸ ಜಿಲ್ಲಾ ಸ್ಥಾನವಾಗಲು ಸಾಧ್ಯ ಇಲ್ಲದಿದ್ದರೆ ಗೋಕಾಕ ನೂತನ ಜಿಲ್ಲೆಯ ಕನಸು ಕನಸಾಗಿಯೇ ಉಳಿಯುವುದರಲ್ಲಿ ಎರೆಡು ಮಾತಿಲ್ಲ ಇದಕ್ಕೆ ಪ್ರಜ್ಞಾವಂತ ಓದುಗರೇ ನಿವೇನಂತಿರಿ ..

 

ಮುನ್ನಾ ಬಾಗವಾನ  : ಮಾಜಿ ಕಾರ್ಯದರ್ಶಿಗಳು ಜಿಲ್ಲಾ ಹೋರಾಟ ಸಮಿತಿ ಗೋಕಾಕ
” ಗೋಕಾಕ ಜಿಲ್ಲಾ ಹೋರಾಟ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಬೆಳವಣಿಗೆಗೆ ಮತ್ತು ರಾಜ್ಯ ಪ್ರೇರಿತವಾಗಿ ನಡೆಯದೆ ನಿಸ್ವಾರ್ಥವಾಗಿ ನಡೆದರೆ ಮಾತ್ರ ಯಶಸ್ವಿಗೊಳಿಸಲು ಸಾಧ್ಯ ಆ ನಿಟ್ಟಿನಲ್ಲಿ ಗೋಕಾಕ ಜನತೆ ಒಂದಾಗಬೇಕು “

 

ಬಸವರಾಜ ಖಾನಪ್ಪನವರ :ಕರವೇ ತಾಲೂಕಾ ಅಧ್ಯಕ್ಷರು ಗೋಕಾಕ

” ಜಿಲ್ಲಾ ಹೋರಾಟ ಪಕ್ಷಾತೀತವಾಗಿ ನಡೆದರೆ ನಮ್ಮ ಬೆಂಬಲ ಅದು ಅಸಾಧ್ಯವಾಗದಿದ್ದರೇ ಕರವೇಯಿಂದ ಹಿಂದೆ ನಡೆದು ಬಂದಂತೆ ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ನಿರಂತರ ಹೋರಾಟವನ್ನು ಮುಂದೆವರೆ ಸಲಾಗುವುದು “

Related posts: