RNI NO. KARKAN/2006/27779|Saturday, July 27, 2024
You are here: Home » breaking news » ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ 

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ

ಗೋಕಾಕ ಡಿ 5: ಯುವ ಜನಾಂಗ ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಂಸ್ಕಾರದೊಂದಿಗೆ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯವೆಂದು ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ ಹೇಳಿದರು.

ನಗರದ ಎಪಿಎಮ್‍ಸಿ ಗಾಂಧಿ ನಗರದ ಶ್ರೀ ಹಣಮಂತ ದೇವರ ಕಾರ್ತಿಕೋತ್ಸವದ ನಿಮಿತ್ಯವಾಗಿ ಇಲ್ಲಿಯ ಎಪಿಎಮ್‍ಸಿ ಆವರಣದಲ್ಲಿ ರಾಜ್ಯಮಟ್ಟದ ಮುಕ್ತ ಹೊನಲು ಬೆಳಕಿನ ವ್ಹಾಲಿಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಯುವಕರು ದುಶ್ಚಟಗಳಿಂದ ದೂರವಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿಸಿಕೊಳ್ಳುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ, ನಗರ ಸಭೆ ಸದಸ್ಯ ಬಾಬು ಶೇಖಬಡೆ, ಮಾಜಿ ಸದಸ್ಯ ರಾಮಸಿದ್ಧ ಖಾನಪ್ಪನವರ, ಎಪಿಎಮ್‍ಸಿ ನಿರ್ದೇಶಕ ಮಹಾಂತೇಶ ಕಲ್ಲೋಳಿ, ಸುನೀಲ ಶಹಾ, ವಾಯ್.ಎಲ್.ಹೆಜ್ಜೆಗಾರ, ರಾಜು ದೊಡಮನಿ, ಪ್ರಶಾಂತ ಜೋಳದ, ಶ್ರೀಶೈಲ ಯಕ್ಕುಂಡಿ, ಸಂಜು ಜಾಧವ, ಮಸ್ತಾನ ಬಾಗವಾನ, ವಿಲಾಶ ಘೋಡಗೇರಿ, ಪ್ರೀತಮ ಓಸ್ವಾಲ, ಶ್ರೀಶೈಲ ಬಬಲಿ, ಜೈ ಹನುಮಾನ ದೇವಸ್ಥಾನ ಅಭಿವೃದ್ದಿ ಸೇವಾ ಸಮಿತಿಯ ಸದಸ್ಯರು ಸೇರಿದಂತೆ ಅನೇಕರು ಇದ್ದರು.

Related posts: