RNI NO. KARKAN/2006/27779|Wednesday, January 14, 2026
You are here: Home » breaking news » ಘಟಪ್ರಭಾ:ಮುಖ್ಯ ಶಿಕ್ಷಕ ತಿಮ್ಮವ್ವಗೋಳ, ಸಹ ಶಿಕ್ಷಕ ಕದಂಮ ಅಮಾನತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಘಟಪ್ರಭಾ:ಮುಖ್ಯ ಶಿಕ್ಷಕ ತಿಮ್ಮವ್ವಗೋಳ, ಸಹ ಶಿಕ್ಷಕ ಕದಂಮ ಅಮಾನತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ 

ಮುಖ್ಯ ಶಿಕ್ಷಕ ತಿಮ್ಮವ್ವಗೋಳ, ಸಹ ಶಿಕ್ಷಕ ಕದಂಮ ಅಮಾನತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ
ಘಟಪ್ರಭಾ ಡಿ 31 : ಪಾಮಲದಿನ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ ತಿಮ್ಮವ್ವಗೋಳ ಹಾಗೂ ಸಹ ಶಿಕ್ಷಕ ನ್ಯಾಮದೇವ ಕದಂಮ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕ ಮತ್ತು ಪಾಮಲದಿನ್ನಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಪಾಮಲದಿನ್ನಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಶಿಕ್ಷಣಾಧಿಕಾರಿ ಹಿರೇಮಠ ಮತ್ತು ಬಿಸಿಯೂಟ ಅಧಿಕಾರಿ ಮಲ್ಲಬನ್ನವರ ಅವರಿಗೆ ಮನವಿ ಅರ್ಪಿಸಲಾಯಿತು.

ಕಳೆದ ಹಲವು ವರ್ಷಗಳಿಂದ ಪಾಮಲದಿನ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ ತಿಮ್ಮವ್ವಗೋಳ ಮತ್ತು ಸಹ ಶಿಕ್ಷಕ ನ್ಯಾಮದೇವ ಕದಂಮ ಅವರು ಶಾಲೆಯ ಪರಿಸರವನ್ನು ಸಂಪೂರ್ಣ ಹಾಳುಗೆಡವಿದ್ದಾರೆ.ಶಾಲಾ ಕೊಠಡಿಗಳಲ್ಲಿ ಅಳವಡಿಸಲಾಗಿರುವ ಪ್ಯಾನ್ ಗಳು ಸಂಪೂರ್ಣ ಹಾಳಾಗಿದ್ದು, ಸ್ವಿಚ್ ಬೋರ್ಡಗಳು ತೀರಾ ಹದಗೆಟ್ಟವೆ. ಇದರಿಂದ ವಿದ್ಯಾರ್ಥಿಗಳ ಶಾಲಾ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಶಾಲೆಯ ಕೊಠಡಿಗಳಲ್ಲಿ ಎಲ್ಲಿ ಬೇಕಲ್ಲಿ ಕಸ ಶೇಖರಿಸಿ ಇಡಲಾಗಿದೆ. ಬಹುಮುಖ್ಯವಾಗಿ ಬಿಸಿಯೂಟದಲ್ಲಿ ಭೋರಿ ಗೋಲಮಾಲ್ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಕೋಡುವ ಬಾಳೆಹಣ್ಣು, ತರಕಾರಿ ಮತ್ತು ಬೆಳೆ ಕಾಳುಗಳು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿಲ್ಲ. ಪಕ್ಕದ ಘಟಪ್ರಭಾ ಗ್ರಾಮದಲ್ಲಿ ತಾಜಾ ತರಕಾರಿ ಮಾರುಕಟ್ಟೆ ಇದ್ದರೂ ಸಹ ಮುಖ್ಯೋಪಾಧ್ಯಾಯ ಅಶೋಕ ತಿಮ್ಮವ್ವಗೋಳ ಅಲ್ಲಿ ಹೋಗಿ ತರಕಾರಿ ತರದೆ ಮಕ್ಕಳಿಗೆ ಕೊಳೆತ ತರಕಾರಿಗಳನ್ನು ತಂದು ಬಳಿಸುತ್ತಿದ್ದಾನೆ. ಇದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆದ ನಿದರ್ಶನಗಳು ಹಲವಾರಿವೆ. ಅದೇ ತೆರನಾಗಿ ಅಡುಗೆ ಕೋಣೆಯಲ್ಲಿಯೂ ಸಹ ಕಸ ಕಡ್ಡಿಗಳು ಬಿದ್ದು ಸಂಪೂರ್ಣ ಗಲಿಜಾಗಿರುತ್ತದೆ. ಮುಖ್ಯೋಪಾಧ್ಯಾಯ ತಿಮ್ಮವ್ವಗೋಳ ಶಾಲೆಗೆ ಬಂದಾಗಿನಿಂದ ಶಾಲೆಯ ಫಲಿತಾಂಶ ಸಂಪೂರ್ಣ ಹದಗೆಟ್ಟಿದೆ. 2021 ರಲ್ಲಿ 100ಕ್ಕೆ 100 ರಷ್ಟಿದ್ದ ಫಲಿತಾಂಶ 22 ರಲ್ಲಿ 95%, 23ರಲ್ಲಿ 92% ,24 ರಲ್ಲಿ 61% ಮತ್ತು 25ರಲ್ಲಿ 53% ಈ ರೀತಿ ಕುಸಿಯುತ್ತಾ ಬಂದಿದೆ.ಹಾಗಾಗಿ ಕಳೆದ 7 ವರ್ಷದಿಂದ ಪಾಮಲದಿನ್ನಿ ಸರಕಾರಿ ಪ್ರೌಢಶಾಲೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದಕ್ಕೆ ಕಾರಣಿಕೃತರಾದ ಶಾಲೆಯ ಮುಖ್ಯೋಪಾಧ್ಯಾಯ ತಿಮ್ಮವ್ವಗೋಳ ಮತ್ತು ಸಹ ಶಿಕ್ಷಕ ನ್ಯಾಮದೇವ ಕದಂಮ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರಿಗೆ ತಕ್ಷಣದಿಂದ ಸೇವೆಯಿಂದ ಅಮಾನತು ಮಾಡಬೇಕು. ಇದಕ್ಕೆ ತಪ್ಪಿದಲ್ಲಿ ಡಿ.ಡಿ.ಪಿ.ಐ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನರ, ಜಿಲ್ಲಾ ಮಾಧ್ಯಮ ವಕ್ತಾರ ಸಾದಿಕ ಹಲ್ಯಾಳ, ದೀಪಕ ಹಂಜಿ, ಹನೀಫ್ ಸನದಿ, ರಾಮಸಿದ್ದ ತೋಳಿ, ಕರೆಪ್ಪ ಹೋರಟ್ಟಿ, ಬಸವರಾಜ ಗಾಡಿವಡ್ಡರ, ರಮೇಶ ಕಮತಿ, ಬಸವರಾಜ ಡಬಾಜ, ರಾಮಪ್ಪ ಮಮದಾಪೂರ, ಶಿವಾನಂದ ಮಸ್ತಿ, ಸರದಾರ ಹಂಜಿ, ವಿಠಲ ಹೂಲಿಕಟ್ಟಿ, ಅಪ್ಪಯ್ಯ ತಿಗಡಿ, ಶಿವಪ್ಪ ಉಪ್ಪಾರ, ಸಿದ್ದು ಹಣಬರಟ್ಟಿ, ಸಂಜು ಕೋಳಿ, ಪುಂಡಲೀಕ ಕರಗಾವಿ, ಮಹಾದೇವ ಹಳ್ಳೂರ, ಲಕ್ಷ್ಮಣ ನಿವಜಗ, ದಯಾನಂದ ಗಣೇಶವಾಡಿ, ಪ್ರೀತಮ ಗಾಡಿವಡ್ಡರ, ಆನಂದ ಕಂದಮ, ಹನುಮಂತ ತೋಳಿ, ವಸಂತ ಹಂಜಿ, ಸಿದ್ದಪ್ಪ ತೋಳಿ, ಬಾಳಪ್ಪ ಮದ್ದಿಹಳ್ಳಿ, ಹನುಮಂತ ಕಮತಿ, ರಾಮ ಕೋಗನೋಳಿ, ಈರಪ್ಪ ರಾಜಾಪೂರೆ, ಅಜೀತ್ ಸಮನಿ, ಯಮನಪ್ಪ ರಾಜಾಪೂರೆ, ವಿಠಲ ರಾಜಾಪೂರೆ, ಲಕ್ಕಪ್ಪ ಕೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: