ಗೋಕಾಕ:ಪತ್ರಕರ್ತರ ವೇದಿಕೆಗೆ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿ ಮಾನಿಂಗ ನೀಲನ್ನವರ, ಜಿಲ್ಲಾಧ್ಯಕ್ಷರಾಗಿ ಶಶಿ ಕಣ್ಣಪ್ಪನವರ ಆಯ್ಕೆ

ಪತ್ರಕರ್ತರ ವೇದಿಕೆಗೆ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿ ಮಾನಿಂಗ ನೀಲನ್ನವರ, ಜಿಲ್ಲಾಧ್ಯಕ್ಷರಾಗಿ ಶಶಿ ಕಣ್ಣಪ್ಪನವರ ಆಯ್ಕೆ
ಗೋಕಾಕ ಡಿ 5 : ಇಲ್ಲಿನ ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ಅಶೋಕ ಭಜಂತ್ರಿ ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ಸಭೆಯು ನಗರದಲ್ಲಿರುವ ಸಂಘದ ಕಛೇರಿಯಲ್ಲಿ ಶುಕ್ರವಾರದಂದು ಜರುಗಿತು .
ಸಭೆಯಲ್ಲಿ ಸಭೆಯಲ್ಲಿ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷರನ್ನಾಗಿ ಮಾನಿಂಗ ನೀಲನ್ನವರ ಹಾಗೂ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಶಿ ಕಣ್ಣಪ್ಪನವರ ಅವರನ್ನು ಆಯ್ಕೆ ಮಾಡಲಾಯಿತು,
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಅಶೋಕ ಭಜಂತ್ರಿ ಮತ್ತು ರಾಜ್ಯ ಉಪಾಧ್ಯಕ್ಷ ಜೈನುಲ್ ಅಂಕಲಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಪತ್ರಿಕಾ ರಂಗ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊಂದಿರುವ ಅಂಗವಾಗಿದ್ದು, ಸಾಮಾಜಿಕ ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿಪತ್ರಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು
ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ ಮರೆನ್ನವರ ಸಂತೋಷ್ ಜುಟ್ಟದವರ ನಾಗರಾಜ್ ತಹಶೀಲ್ದಾರ್ ಚಿದಾನಂದ ಗೌಡರ್ ಶಶಿಕುಮಾರ್ ದಂಡಗೋಳ್ ಉಪಸ್ಥಿತರಿದ್ದರು.
