ಗೋಕಾಕ:ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ : ಡಾ.ಮೋಹನ ಭಸ್ಮೆ

ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ : ಡಾ.ಮೋಹನ ಭಸ್ಮೆ
ಗೋಕಾಕ ನ 1 : ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಶನಿವಾರದಂದು ನಗರದ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ನಗರಸಭೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 70ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ಕರ್ನಾಟಕವು ಒಂದು ಚಿಕ್ಕ ಭಾರತವಾಗಿದ್ದು, ಅಷ್ಟೊಂದು ಸಂಪತ್ತ ಭರಿತವಾಗಿದೆ. ವಿಶೇಷವಾಗಿ ನಮ್ಮ ನಾಡಿನ ಜಾನಪದ ಸೋಗಡು ಬಹಳ ಅರ್ಥಗರ್ಭೀತವಾಗಿದೆ. ನಾಡಿಗಾಗಿ ಏನಾದರೂ ಮಾಡಬೇಕು ಎಂದು ಸಂಕಲ್ಪ ಮಾಡಿದರೆ ಖಂಡಿತವಾಗಿಯೂ ಕನ್ನಡ ನಾಡಿಗೆ ಒಂದಿಷ್ಟು ಕೊಡುಗೆ ನೀಡುವ ನಿಟ್ಟಿನಲ್ಲಿ ನಾವು ಸಾಧನೆ ಮಾಡಬಹುದು ಎಂದ ಅವರು ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸ ಪ್ರಶ್ನೆ ,ಪ್ರಬಂಧ , ರಂಗೋಲಿ ಸ್ವರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಕರವೇ ಸಾಂಸ್ಕೃತಿಕ ಘಟಕದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಡಿ.ವಾಯ್.ಎಸ್.ಪಿ ರವಿ ನಾಯಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ನಗರಸಭೆ ಪೌರಾಯುಕ್ತ ರವಿ ರಂಗಸುಭೆ, ಬಿಇಒ ಜಿ.ಬಿ.ಬಳಗಾರ, ಕೃಷಿ ಅಧಿಕಾರಿ ಎಂ.ಎಂ.ನಧಾಫ, ಎಸ್.ಪಿ.ವರಾಳೆ, ಪಿಎಸ್ಐ ಕೆ.ವಾಲಿಕರ, ಶಿಶು ಅಭಿವೃದ್ಧಿ ಅಧಿಕಾರಿ ಡಿ.ಎಸ್.ಕೂಡವಕ್ಕಲಿಗ,ಎನ್.ಬಿ. ಜನ್ಮಟ್ಟಿ, ಶಿವಾನಂದ ಹಿರೇಮಠ, ಎಲ್.ಕೆ.ತೋರಣಗಟ್ಟಿ, ಡಾ.ಎಂ.ಎಸ್. ಕೊಪ್ಪದ, ಮುಖಂಡರುಗಳಾದ ಅಶೋಕ ಪೂಜಾರಿ, ಸೋಮಶೇಖರ್ ಮಗದುಮ್ಮ, ಕರವೇ ಅಧ್ಯಕ್ಷರುಗಳಾದ ಬಸವರಾಜ ಖಾನಪ್ಪನರ, ಕಿರಣ ಢಮಾಮಗರ, ಪವನ ಮಹಾಲಿಂಗಪೂರ, ಲಕ್ಷ್ಮೀ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


