ಗೋಕಾಕ:ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ

ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ
ಗೋಕಾಕ ಅ 30 : ಹಿಂದೆ ನಡೆಸಲಾದ ಎರಡು ಸಮೀಕ್ಷೆಗಳಲ್ಲಿ ಕಾರಣಾಂತರಗಳಿಂದ ಅನೇಕ ಮಾಜಿ ದೇವದಾಸಿಯರು ಹೊರಗುಳಿದಿದ್ದಾರೆ. ಇದರಿಂದ ಅವರಿಗೆ ಸಿಗಬೇಕಾದ ನ್ಯಾಯೋಚಿತ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ಸರಕಾರ ಈಗ ಮರು ಸಮೀಕ್ಷೆ ನಡೆಸಿದ್ದು, ಅದರಲ್ಲಿ ಒಬ್ಬರು ಹೊರಗುಳಿಯದಂತೆ ನಿಗಾವಹಿಸಬೇಕು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಡಿ.ಎಸ್.ಕೂಡವಕ್ಕಲಿಗ ಹೇಳಿದರು.
ಗುರುವಾರದಂದು ನಗರದಲ್ಲಿ ಚಿಲ್ಡ್ರನ್ ಆಫ ಇಂಡಿಯಾ ಪೌಂಡೇಶನ್ ಮತ್ತು ಅಮ್ಮಾ ಪೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳು, ಬೇಡಿಕೆಗಳ ಪರಿಹಾರಕ್ಕೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
 ದೇವದಾಸಿ ಪದ್ಧತಿ ನಿಷೇಧ, ಅವರ ಕುಟುಂಬಗಳಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ, ಮನೆ, ಭೂಮಿ ಮುಂತಾದ ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವ ‘ದೇವದಾಸಿ ಪದ್ಧತಿ ನಿಷೇಧ ಹಾಗೂ ಪುನರ್ವಸತಿ ಮಸೂದೆ’ಯನ್ನು ದೇವದಾಸಿಯರು ಮತ್ತು ರಾಷ್ಟ್ರೀಯ ಕಾನೂನು ಶಾಲೆ ಜಂಟಿಯಾಗಿ 2018ರಲ್ಲಿ ತಯಾರಿಸಿದ್ದಾರೆ. ಹಾಗಾಗಿ 
 ಸರಕಾರ ಕೈಗೊಂಡಿರುವ ದೇವದಾಸಿಯರ ಮರು ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಂಡು ನಿಖರವಾದ ಮಾಹಿತಿಯನ್ನು ನೀಡಿದರೆ ಸರಕಾರ ಮುಂದಿನ ಯೋಜನೆ ಸಿದ್ದ ಪಡೆಸಲು ಸಹಕಾರಿ ಯಾಗುತ್ತದೆ ಎಂದ ಅವರು 1984ರಲ್ಲಿ ದೇವದಾಸಿ ಕಾಯ್ದೆ ಜಾರಿಯಾದ ನಂತರ ದೇವದಾಸಿ ಪದ್ದತಿಯಲ್ಲಿ ತೊಡಗಿದವರು ಅಪರಾಧಿಗಳು ಹಾಗಾಗಿ ಇದರ ಬಗ್ಗೆ ಜಾಗೃತಿ ಮೂಡಿಸಿ ಮರು ಸಮೀಕ್ಷೆಯಲ್ಲಿ ನಕಲಿ ಹೆಸರು ಬರಸುವವರ ಬಗ್ಗೆ ನಿಗಾವಹಿಸಬೇಕು ಎಂದು ಹೇಳಿದರು. 
 ಶ್ರೀಮತಿ ಮಂಜುಳಾ ಹರಿಜನ ಮಾತನಾಡಿ ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಮಾಜಿ ದೇವದಾಸಿ ಮಕ್ಕಳಿಗೆ ಮೀಸಲಾತಿ ದೊರಕಿಸಬೇಕು.ಮಾಜಿ ದೇವದಾಸಿಯರಿಗೆ ಪುನರ್ ವಸತಿಗಳನ್ನು ಕಲ್ಪಿಸಬೇಕು. ನಿವೇಶನಗಳನ್ನು ಒದಗಿಸಬೇಕು. ಸಾರ್ವಜನಿಕರು ಮಾಜಿ ದೇವದಾಸಿಯರನ್ನು ಕಳಂಕಿತ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಬೇಕು. ಸರಕಾರ ಇವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವಿಶೇಷ ಪ್ಯಾಕೇಜ ನೀಡಬೇಕು. 
 ಈಗಾಗಲೇ ಸರಕಾರದಿಂದ ಮನೆ ಕಟ್ಟುಲು ನೀಡುತ್ತಿರುವ 1 ಲಕ್ಷ ಅನುದಾನವನ್ನು 10 ಲಕ್ಷಕ್ಕೆ ಏರಿಸಬೇಕು. ಪ್ರಸ್ತುತ 2 ಸಾವಿರ ಪಿಂಚಣಿಯನ್ನು 5 ಸಾವಿರ ಮಾಡಬೇಕು. 
 ಮಾಜಿ ದೇವದಾಸಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಹೇಳಿದರು. 
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಶ್ರೀಮತಿ ಶೋಭಾ ಮಲಕ್ಕನವರ, ಸಂಯೋಜಕರುಗಳಾದ ಯಲ್ಲಪ್ಪ ಮಾದರ, ನ್ಯಾಮದೇವ ಹಿರೇಕೂಡಿ, ಪತ್ರಕರ್ತ ಸಾದಿಕ ಹಲ್ಯಾಳ, ರವಿ ಕಡಕೋಳ, ಶ್ರೀಮತಿ ಶೋಭಾ ಉಮರಾಣಿ, ಶ್ರೀಮತಿ ಸುಧಾ ಹಿರೇಮಠ ಉಪಸ್ಥಿತರಿದ್ದರು.
