
ಆಸೆಗಳನ್ನು ತ್ಯಜಿಸಿ ಸತ್ಯ-ಶುದ್ಧ ಕಾಯಕ ನಡಿಸಿ ಜೀವನ ಸಾಗಿಸಬೇಕು : ಮಹಾಂತ ದೇವರು
ಗೋಕಾಕ ಮೇ 16 : ಮಾನವ ಇಂದು ಅತಿಯಾದ ವ್ಯಾಮೋಹ – ದುರಾಸೆಗಳಿಗೆ ಬಲಿಯಾಗಿ ಮಾಲ್ಯರಹಿತವಾಗಿ ಬದೀಕುತ್ತಿದ್ಜಾನೆ.ಆಸೆಗಳನ್ನು ತ್ಯಜಿಸಿ ಸತ್ಯ-ಶುದ್ಧ ಕಾಯಕ ನಡಿಸಿ ಜೀವನ ಸಾಗಿಸಬೇಕು ಎಂದು ಲೋಕಾಪುರದ ಮಹಾಂತ ದೇವರು ಹೇಳಿದರು.
ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ವೇದಿಕೆ, ವಚನ ಸಾಹಿತ್ಯ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 186ನೇ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಸವಣ್ಣನವರು ಕಾಯಕ- ದಾಸೋಹ ಸಮಾನತೆಯ ತತ್ವಗಳನ್ನು ಪ್ರತಿಪಾದಿಸಿದರು.ಕಾಯಕಕ್ಕೆ ಸಮನಾದ ಮತ್ತೊಂದು ಶಬ್ದ ವಿಲ್ಲ ಶೃದ್ದೆಯಿಂದ ,ನಿಷ್ಠೆಯಿಂದ ಮಾಡುವ ಕೆಲಸ ಕಾಯಕವಾಗುತ್ತದೆ. ಈ ದಿಸೆಯಲ್ಲಿ ದುರಾಸೆಗಳಿಗೆ ಬಲಿಯಾಗದೆ ನಿಸ್ವಾರ್ಥ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು 12ನೇ ಶತಮಾನದಲ್ಲಿ ಶಿವಶರಣರು ದೇವರುಗಳು ಸೇರಿದಂತೆ ಸರ್ವರಿಗೂ ಕಾಯಕ ಕಲಿಸಿದರು. ಎಲ್ಲಾ ಶರಣರು ಕಾಯಕ ಜೀವಿಗಳಾಗಿ ಬದುಕಿದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಶಾಲಾ ಮಕ್ಕಳಿಗೆ ಹಮ್ಮಿಕೊಂಡ ವಚನ ಕಂಠಪಾಠ ಸ್ವರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ದೀಪಾ ಖಡಕಬಾವಿ, ಚಿನ್ಮಯಿ ಶೀಗಿಹಳ್ಳಿ, ರಾಣಿ ಪೋಳ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಬಸನಗೌಡ ಪಾಟೀಲ್, ನೀಲಕಂಠ ತೋಟಗಿರ ಮಲ್ಲಪ್ಪ ನೇಸರಗಿ, ಪ್ರಸನ್ ತಂಬಾಕೆ, ಶ್ರೀಮತಿ ಸೇವಂತಾ ಮಚ್ಚಂಡಿಹಿರೇಮಠ, ಶ್ರೀಮತಿ ಸುಲೋಚನಾ ಮಡ್ಡೇನಿ ,ಶ್ರೀಮತಿ ಭಾರತಿ ಮರೆನ್ನವರ ಉಪಸ್ಥಿತರಿದ್ದರು. ಎಸ್.ಕೆ.ಮಠದ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.