ಗೋಕಾಕ:ಯುವಕನ ಭರ್ಬರ ಹತ್ಯೆ : ಗೋಕಾಕ ನಗರದಲ್ಲಿ ಘಟನೆ

ಯುವಕನ ಭರ್ಬರ ಹತ್ಯೆ : ಗೋಕಾಕ ನಗರದಲ್ಲಿ ಘಟನೆ
ಗೋಕಾಕ ಮೇ 4 : ಮಾತನಾಡುವುದಿದ್ದೆ ಇಲ್ಲಿಗೆ ಬಾ ಎಂದು ಕರೆದು ಕಲ್ಲುಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶನಿವಾರದಂದು ರಾತ್ರಿ 8 ಘಂಟೆಗೆ ಸುಮಾರಿಗೆ ನಗರದಲ್ಲಿ ನಡೆದಿದೆ.
ನಗರದ ಜಿ.ಆರ್.ಬಿ.ಸಿ ಕಾಲೋನಿ ಹತ್ತಿರ ಈ ಘಟನೆ ನಡೆದಿದ್ದು, ಮಾರಕಸ್ತ್ರಗಳಿಂದ ಕೊಚ್ಚಿ ಪರಶುರಾಮ್ ಗೊಂಧಳಿ (26) ಎನ್ನುವ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಪರಶುರಾಮ್ ನನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬೇಟಿನೀಡಿ ಪರಿಶೀಲಿನೆ ನಡೆಸಿದ್ದಾರೆ.
