ಗೋಕಾಕ:ಬದಲಾಗಿದ ಶಿಕ್ಷಣ ವ್ಯವಸ್ಥೆ ಬೆನ್ನತ್ತಿ ವಿದ್ಯಾರ್ಥಿಗಳು ಮುನ್ಪಡೆದರೆ ಮಾತ್ರ ಉದ್ಯೋಗವನ್ನು ಪಡೆಯಲು ಸಾಧ್ಯ : ಮಂಜುನಾಥ್ ಬಿ.

ಬದಲಾಗಿದ ಶಿಕ್ಷಣ ವ್ಯವಸ್ಥೆ ಬೆನ್ನತ್ತಿ ವಿದ್ಯಾರ್ಥಿಗಳು ಮುನ್ಪಡೆದರೆ ಮಾತ್ರ ಉದ್ಯೋಗವನ್ನು ಪಡೆಯಲು ಸಾಧ್ಯ : ಮಂಜುನಾಥ್ ಬಿ.
ಗೋಕಾಕ ಫೆ 4 : ಹಿಂದಿನಕ್ಕಿಂತ ಇಂದು ಶಿಕ್ಷಣದ ವ್ಯವಸ್ಥೆ ಬದಲಾಗಿದೆ ಅದನ್ನು ಬೆನ್ನತ್ತಿ ವಿದ್ಯಾರ್ಥಿಗಳು ಮುನ್ಪಡೆದರೆ ಮಾತ್ರ ಉದ್ಯೋಗವನ್ನು ಪಡೆಯಲು ಸಾಧ್ಯ ಎಂದು ಸಾಧನಾ ಅಕ್ಯಾಡೆಮಿಯ ಸಂಸ್ಥಾಪಕ ಮಂಜುನಾಥ್ ಬಿ. ಹೇಳಿದರು
ಮಂಗಳವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಬಿ.ಸಿ.ಎ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಸ್ವರ್ಧಾತ್ಮಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಬರಬೇಕಾದರೆ ರಾಕ್ಯಟ್ ಮಾದರಿಯಲ್ಲಿ ಬೆಳೆದು ನಿಲ್ಲಬೇಕು. ನಮ್ಮ ಬುದ್ದಿಮಟ್ಟದ ಕೆವಲ ಒಂದು ಪ್ರತಿಶತ ಬುದ್ಧಿಮಟ್ಟವನ್ನು ಬಳಸಿಕೊಂಡರೆ ನಾವು ಜಗತ್ತನ್ನೇ ಗೆಲ್ಲಬಹುದು. ವಿದ್ಯಾರ್ಥಿಗಳು ಹಿಡಿದ ಕೆಲಸವನ್ನು ಬಿಟ್ಟುಬಿಡದೆ ಬೆನ್ನತ್ತಿದರೆ ಸಾಧಕರ ಹಾದಿಯಲ್ಲಿ ಸಾಗಬಹುದು. ವಿದ್ಯಾರ್ಥಿಗಳಿಗೆ ಶಿಸ್ತಿನ ತರಬೇತಿ ಒಂದುನ್ನು ಬಿಟ್ಟು ಬೇರೆಯಾವುದೆ ತರಬೇತಿಯನ್ನು ನೀಡಬಹುದು ಆದರೆ ಶಿಸ್ತುಮಾತ್ರ ವಿದ್ಯಾರ್ಥಿಗಳು ತಮ್ಮಲ್ಲಿ ತಾವು ಬೆಳೆಸಿಕೊಳ್ಳಬೇಕು. ಯಾರತ್ತ ಶಿಸ್ತು ಇರುತ್ತದೆ ಅವರು ಎಲ್ಲವನ್ನು ಗೆಲ್ಲಬಹುದು. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುವ ಗುರಿಯನ್ನು ಹೊಂದಿ ಅಭ್ಯಾಸವನ್ನು ಮಾಡಬೇಕು ಪರೀಕ್ಷೆಗಳು ಮುಗಿದ ಮೇಲೆ ಒಂದೆರೆಡು ದಿನ ವಿಶ್ರಾಂತಿ ಪಡೆದ ನಂತರ ಮತ್ತೆ ಓದಿನ ಕಡೆ ಗಮನ ಹರಿಸಿಬೇಕು ಆಗ ಪರೀಕ್ಷೆಗಳಲ್ಲಿ ಯಶಸ್ವಿ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಪ್ರಾಚಾರ್ಯ ಶ್ರೀಮತಿ ಅರ್ಪಾನಾ ಕುಲಕರ್ಣಿ ಉಪಸ್ಥಿತರಿದ್ದರು.