RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ಪ್ರಿಯಾಂಕಾ ಅವರನ್ನು ಜನ ಗೆಲ್ಲಿಸಲೇಬೇಕು ಎಂದು ನಿರ್ಧಾರ ಮಾಡಿದ್ದರಿಂದ ಚಿಕ್ಕೋಡಿಯಲ್ಲಿ ನಾವು ಗೆದ್ದಿದೇವೆ : ಸಚಿವ ಸತೀಶ

ಗೋಕಾಕ:ಪ್ರಿಯಾಂಕಾ ಅವರನ್ನು ಜನ ಗೆಲ್ಲಿಸಲೇಬೇಕು ಎಂದು ನಿರ್ಧಾರ ಮಾಡಿದ್ದರಿಂದ ಚಿಕ್ಕೋಡಿಯಲ್ಲಿ ನಾವು ಗೆದ್ದಿದೇವೆ : ಸಚಿವ ಸತೀಶ 

ಪ್ರಿಯಾಂಕಾ ಅವರನ್ನು ಜನ ಗೆಲ್ಲಿಸಲೇಬೇಕು ಎಂದು ನಿರ್ಧಾರ ಮಾಡಿದ್ದರಿಂದ ಚಿಕ್ಕೋಡಿಯಲ್ಲಿ ನಾವು ಗೆದ್ದಿದೇವೆ : ಸಚಿವ ಸತೀಶ

ಗೋಕಾಕ ಜೂ 5 : ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಜನ ಗೆಲ್ಲಿಸಲೇಬೇಕು ಎಂದು ನಿರ್ಧಾರ ಮಾಡಿದ್ದರಿಂದ ಚಿಕ್ಕೋಡಿ ಲೋಕಸಭೆಯಲ್ಲಿ ನಮ್ಮ ಗೆಲುವು ಸುಲಭವಾಯಿತು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬುಧವಾರದಂದು ನಗರದ ಡಾಲರ್ಸ ಕಾಲನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆ ಬಂದಾಗ ಮಾತ್ರ ನಾವು ಚುನಾವಣೆಗೆ ತಯಾರಿ ಮಾಡುವುದಿಲ್ಲ ಬದಲಾಗಿ ನಿರಂತರ ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ವಂದಿಸುತ್ತೇವೆ ಆ ಕಾರಣ ಕೂಡ ನಮ್ಮ ಗೆಲುವಿಗೆ ಕಾರಣವಾಗಿದೆ. ನಮ್ಮ ಪಕ್ಷದ ಕೆಲ ಶಾಸಕರು ನಮಗೆ ವಿರೋಧ ಮಾಡಿದರು ಹಾಗಾಗಿ ನಮ್ಮ ಗೆಲುವಿನ ಅಂತರ ಸ್ವಲ್ಪ ಕಡಿಮೆ ಆಗಿದೆ ಇಲ್ಲದಿದ್ದರೆ ಈ ಅಂತರ ಇನ್ನು ಹೆಚ್ಚು ಆಗುತ್ತಿತ್ತು. ವಿರೋಧ ಮಾಡಿದರ ಬಗ್ಗೆ ಹೈಕಮಾಂಡ್ ದೂರ ನೀಡುವುದಿಲ್ಲ ಬದಲಾಗಿ ಜನರ ಮತ್ತು ಹೈಕಮಾಂಡ್ ಗಮನಕ್ಕೆ ತರುತ್ತವೆ. ಐದು ವರ್ಷದ ಅವಧಿಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಹೋಗಿ ಅವರ ಕಷ್ಟಗಳಿಗೆ ಸ್ವಂದಿಸುವ ಕಾರ್ಯ ಮಾಡುತ್ತೇವೆ.
ಡೈರೆಕ್ಟರ್, ಪ್ರೊಡ್ಯೂಸರ್ ಫೇಲ್ ಆದರೆ ಈ ರೀತಿಯ ಫಲಿತಾಂಶ ನಿರೀಕ್ಷಿತ. ಚುನಾವಣೆಗೆ ಸಮಯ ಕಡಿಮೆ ಇರುತ್ತದೆ, ಆ ಸಮಯದಲ್ಲಿ ಅಲರ್ಟ್ ಆಗಿ ಇರಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗುತ್ತದೆ, ಆಗಲೇ ನಾವು ಕೆಲಸ ಮಾಡಬೇಕು. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೂ ನಮ್ಮ ಹಿನ್ನಡೆಗೆ ಕಾರಣ ಎಂದು ಅವರು ಹೇಳಿದರು.
ಅವರರವರ ಮತಕ್ಷೇತ್ರಗಳಲ್ಲಿಯೆ ಮತಗಳು ಕಡಿಮೆ ಬಂದ ಪರಿಣಾಮ ನಮ್ಮ ಅಭ್ಯರ್ಥಿಗಳ ಅಲ್ಪ ಮತಗಳ ಅಂತರದಿಂದ ಸೋತ್ತಿದ್ದಾರೆ. ಸೋಲು ಗೆಲುವು ಜನರ ಕೈಯಲ್ಲಿ ಇರುತ್ತದೆ ಜನ ಹೋದ ಬಾರಿ ನಮ್ಮನ್ನು ಸೋಲಿಸಿದರು ಈ ಬಾರಿ ಗೆಲ್ಲಿಸಬೇಕು ಎಂದು ಮನಸ್ಸು ಮಾಡಿದ ಪರಿಣಾಮ ನಾವು ಗೆದ್ದಿದೇವೆ.
ಬೆಳಗಾವಿ ಲೋಕಸಭೆ ಅಭ್ಯರ್ಥಿ ಸೋಲಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬೆಳಗಾವಿಯಲ್ಲಿ ನಾವು ನಮ್ಮ ವಿರೋಧಿ ಅಭ್ಯರ್ಥಿಯನ್ನು ತಿಳದುಕೊಳ್ಳುವಲ್ಲಿ ವಿಫಲವಾಗಿದ ಪರಿಣಾಮ ಸೋಲು ಅನುಭವಿಸಬೇಕಾಯಿತು. ಅವರ ಕಾರ್ಯತಂತ್ರ, ಮತದಾರರ ಒಲವು ಎಲ್ಲವೂ ಕೂಡ್ರಿಕರಿಸಿ ಕೆಲ ನಿರ್ಣಯ ತಗೆದುಕೊಳ್ಳಬೇಕಾಗುತ್ತದೆ ಅದರಲ್ಲಿ ನಮ್ಮ ಪಕ್ಷ ಎಡುವಿದೆ ಎಂದ ಅವರು ಜಾರಕಿಹೊಳಿ ಕುಟುಂಬದ ಬೆಂಬಲಿಗರು ಮತ್ತು ಮತದಾರರು ಎಲ್ಲಾ ಪಕ್ಷದಲ್ಲಿ ಇದ್ದೆ ಇದ್ದಾರೆ ಅದರಿಂದ ಇದು ಜಾರಕಿಹೊಳಿ ಪ್ರಾಭಲ್ಯ ಎಂದು ಹೇಳಲಾಗುವುದಿಲ್ಲ ಅದು ಜನರ ನಿರ್ಧಾರ ಎಂದರು. ಈ ಬಾರಿ ನಾವು ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕೆ ತಂತ್ರಗಾರಿಕೆ ಮಾಡಿದ್ದೇವೆ ಸೋಲಿನಲ್ಲಿ ನಮ್ಮ ಪಾತ್ರವಿಲ್ಲ. 5 ಲಕ್ಷ ಲಿಂಗಾಯತರು ಇದ್ದರು ಸಹ ಅವರು ಸೋತ್ತಿದ್ದಾರೆ ಅದಕ್ಕೆ ಅವರೇ ಉತ್ತರ ನೀಡಬೇಕು ಹೋರತು ನಾವಲ್ಲ ಎಂದು ಹೆಬ್ಬಾಳಕರ ಅವರ ಸೋಲಿನ ವಿಶ್ಲೇಷಣೆ ಮಾಡಿದ ಅವರು ಗಾಳಿ ವಿರೋಧಿ ಬಿಸದರೆ ಯಾರು ಏನು ಮಾಡಲಿಕ್ಕೆ ಆಗೋದಿಲ್ಲ ಎಂದು ಹೇಳಿದರು.

Related posts: