RNI NO. KARKAN/2006/27779|Tuesday, December 30, 2025
You are here: Home » breaking news » ಗೋಕಾಕ:ದಿನಾಂಕ 30 ರಂದು ಗೋಕಾಕದಲ್ಲಿ ಪ್ರಜಾಧ್ವನಿ-2 ಕಾರ್ಯಕ್ರಮ

ಗೋಕಾಕ:ದಿನಾಂಕ 30 ರಂದು ಗೋಕಾಕದಲ್ಲಿ ಪ್ರಜಾಧ್ವನಿ-2 ಕಾರ್ಯಕ್ರಮ 

ದಿನಾಂಕ 30 ರಂದು ಗೋಕಾಕದಲ್ಲಿ ಪ್ರಜಾಧ್ವನಿ-2 ಕಾರ್ಯಕ್ರಮ

ಗೋಕಾಕ ಎ 28 : ಪ್ರಜಾಧ್ವನಿ -2 ಕಾರ್ಯಕ್ರಮ ಮಂಗಳವಾರ ದಿನಾಂಕ 30 ರಂದು ಮಧ್ಯಾಹ್ನ 2 ಘಂಟೆಗೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಲಿದೆ.

ರವಿವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್ ಮುಖಂಡರು ಅಂದು ಬೆಳಗಾವಿ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರ ಪ್ರಚಾರಾರ್ಥ ನಡೆಯುವ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿ ಕೆ ಶಿವಕುಮಾರ್, ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದು, ಕಾರಣ ಗೋಕಾಕ ಹಾಗೂ ಮೂಡಲಗಿ ಮತಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕು ಎಂದು ಕೈ ಮುಖಂಡರು ಮನವಿ ಮಾಡಿದ್ದಾರೆ

ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಲಿಂಗ ದಳವಾಯಿ, ಅಶೋಕ್ ಪೂಜಾರಿ, ಚಂದ್ರಶೇಖರ ಕೊಣ್ಣೂರ, ಡಾ.ಮಹಾಂತೇಶ ಕಡಾಡಿ, ಅಪ್ಜಲ್ ಖತೀಬ್, ಮಾಯಪ್ಪ ತಹಶೀಲ್ದಾರ್, ಸಂಜಯ ಪೂಜಾರಿ, ಪ್ರಕಾಶ್ ಡಾಂಗೆ, ಜಾಕೀರ್ ನದಾಫ, ಎಂ ಕೆ ಪೂಜಾರಿ, ಬಿ ಕೆ ಜಗ್ನನಾಥ ಹಾಗೂ ಮುಖಂಡರು ಉಪಸ್ಥಿತರಿದ್ದರು.

Related posts: