ಯಮಕನಮರಡಿ :ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ ಅಭಿಮತ

ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ ಅಭಿಮತ
ಯಮಕನಮರಡಿ : ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ ಎಂದು ನಿಡಸೋಸಿ ಸಿದ್ದಸಂಸ್ಥಾನ ಮಠದ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ಯಮಕನಮರಡಿ ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋದಕತ್ವದಲ್ಲಿ ಹಮ್ಮಿಕೊಂಡ 10 ನೇ ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯುವ ಶಕ್ತಿ ಹಾಳಾಗಬಾರದು ಎಂದು ಸತೀಶ ಜಾರಕಿಹೊಳಿ ಅವರು ಕಳೆದ ಒಂದು ದಶಕದಿಂದ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಗ್ರಾಮೀಣ ಭಾಗದಲ್ಲಿ ಕಲೆ ,ಸಂಸ್ಕೃತಿ ಉಳಿಯುವಂತೆ ಆಗಿದೆ. ಮೊಬೈಲ್ ಬಂದ ಮೇಲೆ ಜಾನಪದ ಕಲೆಗಳು ಮಾಯವಾಗುತ್ತದೆ. ಇಂತಹ ಕಾರ್ಯಕ್ರಮಗಳು ಅವುಗಳನ್ನು ಉಳಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತಿವೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ನಮ್ಮ ನಾಡಿನ ಸಾಂಸ್ಕೃತಿಕ , ಕಲೆ ಉಳಿಸಲು ಸಾಧ್ಯ ಎಂಬುದನ್ನು ಸಚಿವ ಸತೀಶ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ಅವರಿಂದ ಇನ್ನಷ್ಟು ಮತ್ತಷ್ಟು ಕಾರ್ಯಗಳು ಆಗಲಿ ಎಂದು ಹಾರೈಸಿದರು.
ಹಿರೇಮಠ ಹುಕ್ಕೇರಿಯ ಷ.ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವದರೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಉತ್ತರ ಕರ್ನಾಟಕದ ಭಾಗದ ಜೀವನಾಡಿಯಾಗಿದ್ದಾರೆ. ಇಂದಿನ ಯುವ ಜನಾಂಗ ಸಾಂಸ್ಕೃತಿಕ ಕಲೆಗಳನ್ನು ಮರೆಯುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸತೀಶ ಅವರು ಯುವ ಜನಾಂಗದಲ್ಲಿ ಆಸಕ್ತಿಯನ್ನು ತುಂಬುತ್ಚಿದ್ದಾರೆ ಎಂದು ಹೇಳಿದರು.
ಯಮಕನಮರಡಿ ಹರಿಮಂದಿರದ ಶ್ರೀ ಆನಂದ ಗೋಸಾವಿ ಮಹಾರಾಜರು ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಇದೇ ಸಂಧರ್ಭದಲ್ಲಿ ಶಿಕ್ಷಣ , ಕ್ರೀಡಾ, ಕೃಷಿ, ಸಾಮಾಜಿಕ ಸೇವೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಬಾಲಕೃಷ್ಣ ಹತನೂರಿ, ರಸಿಕಾ ಮೇತಾಳ , ಕೆಂಪಣ್ಣ ಬಿಸಿರೊಟ್ಟಿ, ಶಂಕರ ಗುಡಸ್, ಸುಜಾತಾ ಹದ್ದಾಳಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕುಮಾರ ಬಾಬು ಗೌರಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಇಒ ಶ್ರೀಮತಿ ಪ್ರಭಾವತಿ ಪಾಟೀಲ, ಮುಖಂಡರುಗಳಾದ ಕಿರಣ ರಜಪೂತ, ಪ್ರಕಾಶ ಲಕಶೆಟ್ಟಿ, ರವಿ ಜಿಂಡ್ರಾಳೆ ಉಪಸ್ಥಿತರಿದ್ದರು.