ಗೋಕಾಕ:ನಿದ್ದೆಯಲ್ಲಿ ಗೋಕಾಕ ಶಹರ ಪೊಲೀಸರು : ನಗರದಲ್ಲಿ ಮತ್ತೊಂದು ಮನೆ ಕಳುವು 10ಗ್ರಾಂ. ಬಂಗಾರ 35 ಸಾವಿರ ನಗದು ದೊಚ್ಚಿ ಪರಾರಿ

ನಿದ್ದೆಯಲ್ಲಿ ಗೋಕಾಕ ಶಹರ ಪೊಲೀಸರು : ನಗರದಲ್ಲಿ ಮತ್ತೊಂದು ಮನೆ ಕಳುವು 10 ಗ್ರಾಂ. ಬಂಗಾರ 35 ಸಾವಿರ ನಗದು ದೊಚ್ಚಿ ಪರಾರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 16 :
ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬಂಗಾರದ ಆಭರಣ ಸೇರಿದಂತೆ ನಗದು ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ನಿವಾಸಿ ಉತ್ತಮ ಲೋಹಾರ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಕೆಲಸದ ನಿಮಿತ್ತ ಮನೆಗೆ ಕೀಲಿ ಹಾಕಿಕೊಂಡು ನಗರದಲ್ಲಿಯೇ ಇರುವ ತಮ್ಮ ಸಂಬಂಧಿಕರ ಮನೆಗೆ ಹೋದಾಗ ಯಾರೋ ಕಳ್ಳರು ಮನೆಗೆ ಹಾಕಿದ ಕೀಲಿಯನ್ನು ಮುರಿದಿದ್ದಾರೆ. ಮನೆಯಲ್ಲಿದ್ದ 10 ಗ್ರಾಂ. ಚಿನ್ನಾಭರಣ, 35 ಸಾವಿರ ರೂ. ನಗದು ಕಳ್ಳತನ ಮಾಡಿದ್ದಾರೆ. ಈ ಕುರಿತು ವೀಣಾ ಉತ್ತಮ ಲೋಹಾರ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಗೋಕಾಕ ನಗರ ಪೋಲಿಸ್ ಪಿಎಸ್ಐ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಕಳ್ಳರು ಗೋಕಾಕ ನಗರವನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಕಳೆದ ವಾರವಷ್ಟೇ ನಗರದ ಗುತ್ತಿಗೆದಾರ ತೋಳಿನವರ ಅವರ ಮನೆಯಲ್ಲಿ ಭಾರಿ ಪ್ರಮಾಣದ ಕಳುವು ನಡೆದ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಅಷ್ಟರಲ್ಲಿ ಮತ್ತೊಂದು ಕಳ್ಳತನ ನಡೆದಿರುವದು ಗೋಕಾಕ ಪೊಲೀಸರ ನಡೆ ಅಣಿಕಿಸುವಂತಾಗಿದೆ. ಪದೆ,ಪದೆ ಕಳ್ಳತನ ಪ್ರಕರಣಗಳು ನಡೆದರು ಸಹ ಕಳ್ಳರನ್ನು ಬಂಧಿಸುವಲ್ಲಿ ವಿಫಲವಾಗುತ್ತಿರುವ ಗೋಕಾಕ ಪೊಲೀಸರು ಬಹುತೇಕ ನಿದ್ದೆಯಲ್ಲಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಗೋಕಾಕ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರನ್ನು ಬಂಧಿಸಿ ನಗರವನ್ನು ಕಳ್ಳತನ ಮುಕ್ತ ನಗರವನ್ನಾಗಿ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.