RNI NO. KARKAN/2006/27779|Tuesday, October 14, 2025
You are here: Home » breaking news » ಖಾನಾಪುರ:ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ

ಖಾನಾಪುರ:ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ 

ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ

ಖಾನಾಪುರ ಅ 7: ಕಾಂಗ್ರೇಸ ಸರಕಾರ ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಂತಹ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ, ರಾಜ್ಯದಲ್ಲಿರುವ ಬಡಜರಿಗೆ ಸಹಾಯ ಮಾಡುತ್ತಿದೆ ಎಂದು ಲಿಂಗನಮಠ ಗ್ರಾಪಂ ಸದಸ್ಯ ಮತ್ತು ಕಾಂಗ್ರೆಸ ಯುವ ಮುಖಂಡ ಇಕಬಾಲ ದಾದೂನವರ ಹೇಳಿದರು.

ತಾಲೂಕಿನ ಮಂಗೇನಕೊಪ್ಪ ಗ್ರಾಮದಲ್ಲಿ “ಮಾತೃ ಪೂರ್ಣ ಯೋಜನೆಗೆ” ತಾಪಂ ಸದಸ್ಯರಾದ ಶಿವಾನಂದ ಚಲವಾದಿ ರವರು ಚಾಲನೆ ನೀಡಿದರು.

ರಾಜ್ಯದಲ್ಲಿರುವ ಬಾಣಂತಿ ಸಹೋದರಿಯರು ಆರೋಗ್ಯವಾಗಿರಲು ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿನಿತ್ಯ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ.

ಈ ಸಂಧರ್ಭದಲ್ಲಿ ಪತ್ರಕರ್ತ ಕಾಶೀಮ ಹಟ್ಟಿಹೊಳಿ,ಅಂಗನವಾಡಿಯ ಕಾರ್ಯಕರ್ತೆ ಶೋಭಾ ಮಾಟೊಳ್ಳಿ, ಆಶಾ ಕಾರ್ಯಕರ್ತೆ ತಾಯವ್ವ ಮಾಟೊಳ್ಳಿ, ಗ್ರಾಮಸ್ಥರು, ಬಾಣಂತಿಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

Related posts: