ಗೋಕಾಕ:ಕಾರ್ಯಚರಣೆ ವೇಳೆ ಗಿಡ ಏರಿ ಕುಳಿತ ಚಿರತೆ : ಅಕ್ಕಪಕ್ಕದ 7 ಶಾಲೆಗಳಿಗ ನಾಳೆ ರಜೆ ಘೋಷಣೆ ತಹಶೀಲ್ದಾರ್ ಡಿ.ಜಿ
ಕಾರ್ಯಚರಣೆ ವೇಳೆ ಗಿಡ ಏರಿ ಕುಳಿತ ಚಿರತೆ : ಅಕ್ಕಪಕ್ಕದ 7 ಶಾಲೆಗಳಿಗ ನಾಳೆ ರಜೆ ಘೋಷಣೆ ತಹಶೀಲ್ದಾರ್ ಡಿ.ಜಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 11:
ಧರ್ಮಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಿದ್ದ ಸಂದರ್ಭದಲ್ಲಿ ಮರದಲ್ಲಿ ಕಾಣಿಸಿಕೊಂಡ ಚಿರತೆ ಮರದಿಂದ ಕೆಳಗಿಳಿದು ಹೊಲದಲ್ಲಿ ಓಡಿ ಹೋಗಿದೆ.
ಕಾರ್ಯಚರಣೆ ಭಯದಿಂದ ಸಾಗಿದ್ದು, ಯಾರು ಆತಂಕ ಪಡಬಾರದು ಶೋಧ ಕಾರ್ಯಚರಣೆ ತೀವ್ರ ಗತಿಯಿಂದ ನಡೆದಿದ್ದು, ಧರ್ಮಟ್ಟಿ ಗ್ರಾಮದ ಅಕ್ಕಪಕ್ಕದಲ್ಲಿ ಬರುವ 7 ಶಾಲೆಗಳನ್ನು ಚಿರತೆ ಶೋಧ ಕಾರ್ಯ ಮುಗಿಯುವವರೆಗೆ ಜಿಲ್ಲಾಧಿಕಾರಿಗಳ ನಿರ್ದೆಶನದ ಮೆರೆಗೆ ರಜೆಯನ್ನು ಘೋಷಿಸಲಾಗಿದೆ ಎಂದು ತಹಶೀಲ್ದಾರ್ ಡಿ.ಜಿ.ಮಹಾತ್ ಪತ್ರಿಕೆಗೆ ತಿಳಿಸಿದ್ದಾರೆ.