RNI NO. KARKAN/2006/27779|Wednesday, September 18, 2024
You are here: Home » breaking news » ಗೋಕಾಕ:ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಹಕಾರ ನೀಡುತ್ತಿದೆ : ವರದಾಯಿ

ಗೋಕಾಕ:ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಹಕಾರ ನೀಡುತ್ತಿದೆ : ವರದಾಯಿ 

ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಹಕಾರ ನೀಡುತ್ತಿದೆ : ವರದಾಯಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು : 1

 

ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಹಕಾರ ನೀಡುತ್ತಿದೆ ಎಂದು ಇಲ್ಲಿಯ ರೋಟರಿ ಸಂಸ್ಥೆಯ ಅಧ್ಯಕ್ಷ ಗಣೇಶ ವರದಾಯಿ ಹೇಳಿದರು.
ನಗರದ ಪುಂಡಿಕೇರಿಯಲ್ಲಿರುವ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 1 ಕ್ಕೆ ರೋಟರಿ ಸಂಸ್ಥೆಯಿಂದ ಎಲ್.ಇ.ಡಿ. ಪ್ರೊಜೆಕ್ಟರ್ ಹಾಗೂ ಇನ್ನರ್‍ವ್ಹೀಲ್ ಸಂಸ್ಥೆಯಿಂದ ಕೈ ತೊಳೆಯುವ ತೊಟ್ಟಿಯನ್ನು ಉಚಿತವಾಗಿ ನೀಡಿದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು.
ಶಿಕ್ಷಕರು ಈ ಸ್ಪರ್ಧಾತ್ಮಕ ಯುಗದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಿದ್ಧಗೊಳಿಸಬೇಕಾಗಿದೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳಿಂದ ಪ್ರತಿಭಾನ್ವಿತರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ, ಬಿಸಿಯೂಟ ಯೋಜನಾಧಿಕಾರಿ ಎ.ಬಿ.ಮಲಬನ್ನವರ, ರೋಟರಿ ಸಂಸ್ಥೆಯ ದಿಲೀಪ ಮೆಳವಂಕಿ, ಸೋಮಶೇಖರ ಮಗದುಮ್ಮ ಇನ್ನರ್‍ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ವರದಾಯಿ, ಕಾರ್ಯದರ್ಶಿ ವಿದ್ಯಾ ಗುಲ್ಲ, ಅನುಸೂಯಾ ಧೂಳಾಯಿ, ಸೀತಾ ಬೆಳಗಾವಿ, ಅನುಪಮಾ ಗಚ್ಚಿ, ಆರತಿ ನಾಡಗೌಡ, ಶಿಲ್ಪಾ ಚುನಮರಿ, ಜಯಾ ಕಮತ, ಮುಖ್ಯೋಪಾಧ್ಯಾಯ ಎಸ್.ಎ.ಗುರುಪುತ್ರ, ಜಿ.ಆರ್.ಮಾಳಗಿ, ಆರ್.ಬಿ.ಢವಳೇಶ್ವರ ಸೇರಿದಂತೆ ಅನೇಕರು ಇದ್ದರು.

Related posts: