ಗೋಕಾಕ:ಪ್ರಕಾಶ ಹುಕ್ಕೇರಿ ಅವರಿಗೆ ಬಿಜೆಪಿಯ ಕೋರೆ, ಕತ್ತಿ ಹಾಗೂ ಸವದಿ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಪ್ರಕಾಶ ಹುಕ್ಕೇರಿ ಅವರಿಗೆ ಬಿಜೆಪಿಯ ಕೋರೆ, ಕತ್ತಿ ಹಾಗೂ ಸವದಿ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ-ವಾರ್ತೆ, ಗೋಕಾಕ ಜೂ 13 :
ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಬಿಜೆಪಿಯ ಕೋರೆ, ಕತ್ತಿ ಹಾಗೂ ಸವದಿ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ ಚಿಕ್ಕೋಡಿ ಭಾಗದ ಜನ ಅವರಿಗೆ ಈಗಾಗಲೇ 30 ವರ್ಷಗಳಿಂದ ಸರ್ಟಿಫಿಕೇಟ್ ನೀಡಿದ್ದಾರೆ ಹಾಗಾಗಿ ಅವರು ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಈ ಬಾರಿ ಪ್ರಥಮ ಬಾರಿಗೆ ಪ್ರಕಾಶ ಹುಕ್ಕೇರಿಯವರ ಮೂಲಕ ಜಯ ಸಾಧಿಸಲಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪದವಿಧರ ಕ್ಷೇತ್ರದ ಮತದಾರರ ಸಂಖ್ಯೆ ಬಹಳ ವಿರುವದರಿಂದ ಸ್ವಲ್ಪ ಕಷ್ಟವಾದರೂ ಅದನ್ನು ಗೆಲುವು ಪ್ರಯತ್ನ ಮಾಡಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಮೂರು ಜಿಲ್ಲೆಗಳಲ್ಲಿ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದ ಅವರು ಕಾನೂನುನಲ್ಲಿ ಸ್ವರ್ಧೆಗೆ ಅವಕಾಶ ವಿರುವದರಿಂದ ಹುಕ್ಕೇರಿ ಅವರು ಸ್ವರ್ಧೆ ಮಾಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರಕಾರ ಇದೆ. ಬೇಕಾದರೆ ಅವರು ಪದವಿಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಪದವಿ ಮಾಡಿದವರು ಮತ್ತು ಶಿಕ್ಷಕರೆ ಸ್ವರ್ಧೆ ಮಾಡಬೇಕು ಎಂದು ನಿಯಮ ಮಾಡಲಿ ಅದಕ್ಕೆ ನಮ್ಮ ಪಕ್ಷ ಸಿದ್ದವಿದೆ. ಆದರೆ ಕಾನೂನುನಲ್ಲಿ ಇನೂ ಕಲಿಯದವರು ಸಹ ಸ್ವರ್ಧೆ ಮಾಡಲು ಅವಕಾಶ ವಿರುವದರಿಂದ ಪ್ರಕಾಶ್ ಅವರು ಸ್ವರ್ಧೆ ಮಾಡಿದ್ದಾರೆ ಅಷ್ಟೇ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಒಂದೊಂದು ಸ್ಥಾನಕ್ಕೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಹಾಗೇನು ಆಗಿಲ್ಲ ಅವರವರ ಪಕ್ಷದವರು ಈ ಚುನಾವಣೆಯನ್ನು ಗಂಭೀರವಾಗಿ ತಗೆದುಕೊಂಡು ಪ್ರಚಾರ ಮಾಡಿದ್ದಾರೆ.ಅಭ್ಯರ್ಥಿ ಶಕ್ತಿಯ ಮೇಲೆ ಆಯಾ ಚುನಾವಣೆಗಳು ನಡೆಯುತ್ತವೆ ಅದಕ್ಕಾಗಿ ನಿಮಗೆ ಹಾಗೆ ಅನಿಸಿರ ಬಹುದು ಆದರೆ ಹಾಗೆ ನಡೆದಿಲ್ಲ ಎಲ್ಲರೂ ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ ಎಂದು ಅವರು ಹೇಳಿದರು.