RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ : ಶಾಸಕ ರಮೇಶ

ಗೋಕಾಕ:ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ : ಶಾಸಕ ರಮೇಶ 

ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ : ಶಾಸಕ ರಮೇಶ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :

 

ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಶಾಂತಿ, ನೆಮ್ಮದಿ ಎಂಬ ಫಲ ಸಿಗುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಶನಿವಾರದಂದು ನಗರದ ಕುರಬರ ದಡ್ಡಿಯ ಶ್ರೀ ವಿಠ್ಠಲ ದೇವರ ಹಾಗೂ ಮುರಸಿದ್ದೇಶ್ವರ ದೇವಸ್ಥಾನದ ಜಾತ್ರಾಮಹೋತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು, ಜಾತ್ರಾ ಕಮೀಟಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಭಕ್ತಿ ಎಂಬುದು ಮನುಷ್ಯನಲ್ಲಿ ಇದ್ದರೆ ಸಾಕು. ಪ್ರತಿ ದಿನ ಒಳ್ಳೆಯ ಮನಸ್ಸಿನಿಂದ ಪೂಜೆ ಮಾಡಿದರೆ, ದೇವರು ಒಲಿಯುತ್ತಾನೆ. ನಾವು ಒಳ್ಳೆಯತನ ರೂಢಿಸಿಕೊಂಡರೆ, ಇತರರಿಗೂ ಉತ್ತಮ. ನಮ್ಮಿಂದ ಒಳ್ಳೆತನ ರವಾನೆಯಾದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಸದಸ್ಯ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಹನುಮಂತ ಕಾಳಮ್ಮನಗುಡಿ, ಹರೀಶ ಬುದಿಹಾಳ, ವಿಜಯ ಜತ್ತಿ, ಕೆಂಚಪ್ಪ ಗೌಡರ, ರಾಯಪ್ಪ ಗೋಟೆನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: