RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಮುಸ್ಲಿಂ ಸಮುದಾಯ ಭಾಂಧವರು ಊಹಾಪೋಹಗಳಿಗೆ ಕಿವಿಗೋಡದೆ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ : ಜಾವೇದ್ ಗೋಕಾಕ

ಗೋಕಾಕ:ಮುಸ್ಲಿಂ ಸಮುದಾಯ ಭಾಂಧವರು ಊಹಾಪೋಹಗಳಿಗೆ ಕಿವಿಗೋಡದೆ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ : ಜಾವೇದ್ ಗೋಕಾಕ 

ಮುಸ್ಲಿಂ ಸಮುದಾಯ ಭಾಂಧವರು ಊಹಾಪೋಹಗಳಿಗೆ ಕಿವಿಗೋಡದೆ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ : ಜಾವೇದ್ ಗೋಕಾಕ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 20 :

 
ಮುಸ್ಲಿಂ ಸಮುದಾಯ ಭಾಂಧವರು ಯಾವುದೇ ಊಹಾಪೋಹಗಳಿಗೆ ಕಿವಿಗೋಡದೆ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಅಂಜುಮನ್ ಏ ಇಸ್ಲಾಂ ಕಮೀಟಿಯ ಚೇರಮನ್ ಜಾವೇದ್ ಗೋಕಾಕ ಹೇಳಿದರು .
ಸೋಮವಾರದಂದು ನಗರದ ಲಕ್ಕಡಗಲ್ಲಿ ಶಾದಿ ಮಹಲನಲ್ಲಿ ಹಮ್ಮಿಕೊಂಡ ಲಸಿಕಾ ಆಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ವಂದತಿಗಳಿಗೆ ಮಹತ್ವ ನೀಡಬೇಡಿ. ಇಂದಿನ ಸಮಯದಲ್ಲಿ ಆರೋಗ್ಯವಾಗಿರು ವುದು ಬಹುಮುಖ್ಯ. ಕೋವಿಡ್‌ನಿಂದಾಗಿ ಜನರ ಜೀವನದಲ್ಲಿ ಸಾಕಷ್ಟು ಏರು ಪೇರಾಗಿದೆ. ಕೊರೊನಾ ಹೋಗಲಾಡಿಸಲು ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಶ್ರಮಪಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ ಇವರಿಗೆ ಸಹಕಾರ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಚೇರಮನ್ ಕೆ.ಎಂ ಗೋಕಾಕ, ನಗರಸಭೆ ಸದಸ್ಯ ಯೂಸುಫ್ ಅಂಕಲಗಿ, ಮುಖಂಡರುಗಳಾದ ಹುಸೇನಸಾಬ ಫನಿಬಂದ, ಅಬ್ದುಲವಹಾಬ ಜಮಾದಾರ, ಇಸ್ಮಾಯಿಲ್ ಜಮಾದಾರ, ಜಾಕೀರ ನಾಯಿಕ,ಹಾಜಿ ಗಫಾರಸಾಬ ಕಾಗಜಿ, ಇಮ್ತಿಯಾಜ ತರಾಸಗರ, ಶರೀಫ ಮುಧೋಳ, ಅಲ್ಲಾಭಕ್ಷ ಮುಲ್ಲಾ , ಇಸ್ಮಾಯಿಲ್ ಮಲ್ಲಾಪೂರಿ, ಕಯ್ಯೂಮ ಖೈರದಿ,ಅಬ್ಬುಲಸತ್ತಾರ ಶಾಬಾಶಖಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: