RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ರವಿವಾರ ದಿ. 12 ರಂದು ತಾಲೂಕಾ ಮಟ್ಟದ ಚೆಸ್ ಪಂದ್ಯಾವಳಿ

ಗೋಕಾಕ:ರವಿವಾರ ದಿ. 12 ರಂದು ತಾಲೂಕಾ ಮಟ್ಟದ ಚೆಸ್ ಪಂದ್ಯಾವಳಿ 

ರವಿವಾರ ದಿ. 12 ರಂದು ತಾಲೂಕಾ ಮಟ್ಟದ ಚೆಸ್ ಪಂದ್ಯಾವಳಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 9 :

ಇಲ್ಲಿನ ಲಕ್ಷ್ಮೀ ಎಜುಕೇಶನ್ ಟ್ರಸ್ಟ್, ಗೋಕಾಕ ತಾಲೂಕಾ ಪ್ರೇಸ್ ಅಸೋಸಿಯೇಷನ್, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇವುಗಳ ಸಂಯುಕ್ತಾಶಯದಲ್ಲಿ ದಿ. 12 ರವಿವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಸಭಾಂಗಣದಲ್ಲಿ ಮುಂಜಾನೆ 10 ಘಂಟೆಗೆ   7 ರಿಂದ 10 ತರಗತಿ ವಿದ್ಯಾರ್ಥಿಗಳಿಗೆ ಹಾಗೂ 35 ವರ್ಷ ಮೇಲ್ಪಟ್ಟ ಯುವಕರಿಗೆ  ತಾಲೂಕಾ ಮಟ್ಟದ ಚೆಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಟ್ರಸ್ಟನ ಚೇರಮನರಾದ ಡಾ.ಭೀಮಶಿ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ ಆಗಮಿಸಿಲಿದ್ದು, ಸ್ವರ್ಧೆಯಲ್ಲಿ ವಿಜೇತರಾದ ಸ್ವರ್ಧಾಳುಗಳಿಗೆ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹಾಗೂ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಅವರು ಬಹುಮಾನ ವಿತರಿಸಲಿದ್ದಾರೆ. ಕಾರಣ ಭಾಗವಹಿಸಲು ಇಚ್ಛಿಸುವ ಸ್ವರ್ಧಾಳುಗಳು ಸ್ವರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸ್ವರ್ಧೆಯ ಸಂಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Related posts: