ಗೋಕಾಕ:ಚಿಕ್ಕೋಳಿ ಸೇತುವೆಗೆ ಲಖನ್ ಜಾರಕಿಹೊಳಿ,ಅಂಬಿರಾವ ಪಾಟೀಲ ಭೇಟಿ : ದುರಸ್ಥಿ ಕಾರ್ಯ ಪರಿಶೀಲನೆ
ಚಿಕ್ಕೋಳಿ ಸೇತುವೆಗೆ ಲಖನ್ ಜಾರಕಿಹೊಳಿ,ಅಂಬಿರಾವ ಪಾಟೀಲ ಭೇಟಿ : ದುರಸ್ಥಿ ಕಾರ್ಯ ಪರಿಶೀಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 27 :
ಕಳೆದ ವಾರ ಸುರಿದ ಭಾರಿ ಮಳೆಯಿಂದ ಮಾರ್ಕಂಡೇಯ , ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗೆ ಉಂಟಾದ ಪ್ರವಾಹದಿಂದ ಗೋಕಾಕ ನರಗದ ಚಿಕ್ಕೋಳಿ ಮತ್ತು ಲೋಳಸೂರ ಸೇತುವೆಗಳು ಮುಳುಗಡೆಗೊಂಡ ಸಂಚಾರ ಸ್ಥಗಿತಗೊಳಿಸಲಾಗಿತ್ತು, ಕಳೆದ ಮೂರು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ಮಾರ್ಕಂಡೇಯ ನದಿ ನೀರು ಇಳಿಮುಖವಾಗಿದ್ದು, ಮಂಗಳವಾರದಿಂದ ಚಿಕ್ಕೋಳಿ ಸೇತುವೆ ಸಂಚಾರ ಮುಕ್ತವಾಗಿದೆ.
ಸೇತುವೆ ಮೇಲೆ ಭಾರಿ ಪ್ರಮಾಣ ನೀರು ಬಂದಿರುವುದರಿಂದ ಸೇತುವೆಯ ಪಕ್ಕ ನಿರ್ಮಿಸಲಾಗಿದ್ದ ,ತಡೆ ಕಂಬಗಳು ಹಾಳಾಗಿದ್ದು, ಸೇತುವೆ ಮೇಲಿನ ರಸ್ತೆ ಹದಗೆಟ್ಟಿದೆ. ಸೇತುವೆ ದುರಸ್ಥಿ ಕಾರ್ಯ ಭರದಿಂದ ಸಾಗಿದೆ. ಲೋಳಸೂರ ಸೇತುವೆ ಮೇಲೆ ಇನ್ನೂ 2 ಅಡಿಯಷ್ಟು ನೀರು ನಿಂತಿರುವುದರಿಂದ ಲೋಳಸೂರ ಸೇತುವೆಯು ಇನ್ನು ಸಂಚಾರ ಮುಕ್ತವಾಗಿಲ್ಲ, ಸೇತುವೆ ಅಕ್ಕಪಕ್ಕದ ರಸ್ತೆ ಹದಗೆಟ್ಟಿದ್ದು ದುರಸ್ಥಿ ಕಾರ್ಯ ಪ್ರಗತಿಯಲ್ಲಿದೆ.
ಮಂಗಳವಾರದಂದು ಚಿಕ್ಕೋಳಿ ಸೇತುವೆಗೆ ಭೇಟಿ ನೀಡಿ ದುರಸ್ಥಿ ಕಾರ್ಯವನ್ನು ಪರಿಶೀಲಿಸಿದ ಲಖನ್ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಹೆಚ್ಚಾಗಿದ್ದು, ಸಂಚಾರಕ್ಕೆ ತೊಂದರೆಯಾಗದಂತೆ ಸೇತುವೆಯನ್ನು ದುರಸ್ಥಿಗೋಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗೋಕಾಕ ಗ್ರಾಮೀಣ ಪಿಎಸ್ಐ ನಾಗರಾಜ್ ಖಿಲಾರೆ ಉಪಸ್ಥಿತರಿದ್ದರು.