RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕೆಎಂಎಫ್ ನಿರ್ದೇಶಕ ಅಮರನಾಥ್ ಜಾರಕಿಹೊಳಿ ಅವರಿಂದ ಚಾಲನೆ

ಗೋಕಾಕ:ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕೆಎಂಎಫ್ ನಿರ್ದೇಶಕ ಅಮರನಾಥ್ ಜಾರಕಿಹೊಳಿ ಅವರಿಂದ ಚಾಲನೆ 

ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕೆಎಂಎಫ್ ನಿರ್ದೇಶಕ ಅಮರನಾಥ್ ಜಾರಕಿಹೊಳಿ ಅವರಿಂದ ಚಾಲನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 28 :

 

ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಸರಕಾರಿ ನೌಕರರಿಗೆ ಹಮ್ಮಿಕೊಂಡ ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರದಂದು ಕೆಎಂಎಫ್ ನಿರ್ದೇಶಕ ಅಮರನಾಥ್ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮರನಾಥ ಜಾರಕಿಹೊಳಿ ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಸರಕಾರಿ ನೌಕರರ ಆರೋಗ್ಯ ಬಹುಮುಖ್ಯವಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಯಾರು ಕೂಡಾ ಭಯಪಡದೆ ಲಸಿಕೆ ಹಾಕಿಸಿಕೊಂಡು ಸಂಭವನೀಯ ಕೊರೋನಾ ಮೂರನೇ ಅಲೆಯಿಂದ ಸುರಕ್ಷಿತವಾಗಿ ಇರಬೇಕು ಎಂದು ಹೇಳಿದರು.

‌ಈ ಸಂದರ್ಭದಲ್ಲಿ ಸುರೇಶ ಸನದಿ, ಜಿ.ಆರ್.ಮಾಳಗಿ, ಬಿ.ಆರ್.ಮುರಗೋಡ, ವಿಠಲ ಭಂಗಿ, ಬಿ.ಎಂ.ಕೊಡ್ಲ್ಯಾಳ , ಶ್ರೀಮತಿ ಎಂ.ವ್ಹಿ.ಬಾಗೆನ್ನನವರ, ಕೃಷ್ಣಕುಮಾರ್ ಎಸ್.ಕೆ, ಆರ್.ಎಂ ಅಗಳನ್ನವರ, ಟಿ.ಬಿ.ಬಿಲ್ಲ, ಬಿ.ಎ ಮಾಲದಿನ್ನಿ, ಪಿ.ಆರ್.ಧನ್ಯಾಳಮಠ, ಬಿ.ಎನ್.ಶಿಂಗಾಡಿ, ಕೆ.ಬಿ.ಗಸ್ತಿ, ವಿ.ಆರ್.ತಡಸಲ್ಲ, ಎಸ್.ಆರ್.ಡೊಂಗರೆ, ಕೆ.ಎನ್.ವಣ್ಣೂರ, ಸಂಗಮೇಶ ಕೊಂತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: