RNI NO. KARKAN/2006/27779|Wednesday, January 14, 2026
You are here: Home » breaking news » ಘಟಪ್ರಭಾ:ಶಾಸಕ ರಮೇಶ ಜಾರಕಿಹೊಳಿ ಅವರಿಂದ ಕೊವೀಡ್ ರಕ್ಷಾ ಕಿಟ ವಿತರಣೆ

ಘಟಪ್ರಭಾ:ಶಾಸಕ ರಮೇಶ ಜಾರಕಿಹೊಳಿ ಅವರಿಂದ ಕೊವೀಡ್ ರಕ್ಷಾ ಕಿಟ ವಿತರಣೆ 

ಶಾಸಕ ರಮೇಶ ಜಾರಕಿಹೊಳಿ ಅವರಿಂದ ಕೊವೀಡ್ ರಕ್ಷಾ ಕಿಟ ವಿತರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮೇ 28 :

 

ಗೋಕಾಕ ಮತಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿ ಅವರು ವೈಯಕ್ತಿಕವಾಗಿ ತಾಲೂಕಿನ ಕೊರೋನಾ ವಾರಿಯರ್ಸಗಳಿಗೆ ವಿತರುತ್ತಿರುವ ರಕ್ಷಾ ಕಿಟ್‍ವನ್ನು ಶಾಸಕರ ಆಪ್ತ ಸಹಾಯಕರಾದ ಸುರೇಶ ಸನದಿ ಅವರು ನಗರದ ವಿಠ್ಠಲ ದೇವಸ್ಥಾನದಲ್ಲಿ ಶುಕ್ರವಾರ ವಿತರಿಸಿದರು.
ಪುರಸಭೆ ಸಿಬ್ಬಂದಿಗಳು, ಪತ್ರಕರ್ತರು, ಅಂಗನವಾಡಿ, ಆಶಾ ಕಾರ್ಯರ್ಕತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೈನಿಟೈಜರ, ಹ್ಯಾಂಡ್ ಗ್ಲೋಸ್, ಮಾಸ್ಕ್, ಫೇಸ್ ಶಿಲ್ಡ್ ಸೇರಿದಂತೆ ಕೋವಿಡ್ ರಕ್ಷಾ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ, ಪ.ಪಂ ಸದಸ್ಯರಾದ ಗಂಗಾಧರ ಬಡಕುಂದ್ರಿ, ಸಲೀಮ ಕಬ್ಬೂರ, ಮಲ್ಲೇಶ ಕೋಳಿ, ಪ್ರವೀಣ ಮಟಗಾರ, ಸುರೇಶ ಪೂಜೇರಿ, ಮಲ್ಲಿಕಾರ್ಜನ ತುಕ್ಕಾನಟ್ಟಿ, ಹಿರಿಯ ಪತ್ರಕರ್ತರಾದ ಜಿ.ಎಸ್.ರಜಫೂತ, ಗಣೇಶ ಗಾಣಿಗ, ದಿಲಾವರ ಬಾಳೇಕುಂದ್ರಿ, ರಮೇಶ ಜಿರಲಿ, ಅಪ್ಪಾಸಾಬ ಮುಲ್ಲಾ, ದಯಾನಂದ ಪೂಜಾರಿ, ಮುಖ್ಯಾಧಿಕಾರಿ ಕೆ.ಭೀ.ಪಾಟೀಲ ಸೇರಿದಂತೆ ಪುರಸಭೆ ಸಿಬ್ಬಂದಿ ವರ್ಗದವರು, ಅಂಗನವಾಡಿ, ಆಶಾ ಕಾರ್ಯರ್ಕತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅನೇಕರು ಇದ್ದರು.

Related posts: