ಗೋಕಾಕ:ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ನೆರವು ನೀಡುವಂತೆ ಆಗ್ರಹಿಸಿ ಶಾಸಕರ ಮುಖಾಂತರ ಸರಕಾರಕ್ಕೆ ಮನವಿ
ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ನೆರವು ನೀಡುವಂತೆ ಆಗ್ರಹಿಸಿ ಶಾಸಕರ ಮುಖಾಂತರ ಸರಕಾರಕ್ಕೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 27:
ಕೊರೋನಾ ಸಂಕಷ್ಟದಲ್ಲಿರುವ ವೃತ್ತಿನಿರತ ಛಾಯಾಗ್ರಾಹಕರಿಗೆ ಸರಕಾರ ನೆರವು ನೀಡುವಂತೆ ಆಗ್ರಹಿಸಿ ಇಲ್ಲಿನ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳು ಸರಕಾರಕ್ಕೆ ಮನವಿ ಅರ್ಪಿಸಿದರು.
ಗುರುವಾರದಂದು ನಗರದ ಶಾಸಕರ ಕಾರ್ಯಾಲಯದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ಪದಾಧಿಕಾರಿಗಳು ಶಾಸಕ ರಮೇಶ ಜಾರಕಿಹೊಳಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸತತ ಎರಡು ವರ್ಷಗಳಿಂದ ಕೊವಿಡ್ 19 (ಕರೋನಾ) ಸಾಂಕ್ರಾಮಿಕ ರೋಗದಿಂದ ಛಾಯಾಗ್ರಾಹಕರ ಬದುಕು ಬೀದಿಗೆ ಬಂದಿದೆ ನಮ್ಮ ವೃತ್ತಿ ಮದುವೆ ಹಾಗೂ ಸಮಾರಂಭದ ಮೇಲೆ ಅವಲಂಬಿತವಾಗಿದೆ ಪ್ರತಿ ವರ್ಷದ ಮಾರ್ಚ, ಏಪ್ರೀಲ್, ಹಾಗೂ ಮೇ ತಿಂಗಳುಗಳು ನಮ್ಮ ವೃತ್ತಿ ಬದುಕನ್ನು ಕಟ್ಟಿಕೊಡುವ ತಿಂಗಳುಗಳಾಗಿದ್ದು, ಈ ಮೂರು ತಿಳಂಗಳ ದುಡಿಮೆ ಇಡಿ ವರ್ಷದ ಕುಡುಂಬದ ನಿರ್ವಹನೆ ದುಡಿಮೆಯಾಗಿದೆ. ಈ ಸೀಜನ್ ಮೇಲೆ ನಮ್ಮ ವೃತ್ತಿ ಅವಲಂಬಿತವಾಗಿದೆ. ಕಳೆದ ವರ್ಷ ಮಾರ್ಚ ತಿಂಗಳಿಂದ ಹಾಕಲಾದ ಲಾಕಡೌನಿಂದಾಗಿ ಕೆಲಸವಿಲ್ಲದೇ ಕಂಗಾಲಾಗಿದ್ದ ಛಾಯಾಗ್ರಾಹಕರ ಬದುಕು ಈ ವರ್ಷವೂ ಮಾರ್ಚ ತಿಂಗಳಲ್ಲಿಯೇ ಲಾಕಡೌನ ಆಗಿದ್ದರಿಂದ ದಿಕ್ಕೆತೋಚದಹಾಗಾಗಿದೆ ಮತ್ತು 2019 ರಲ್ಲಿ ಅತೀವೃಷ್ಠಿಯಿಂದಾಗಿ ಗೋಕಾಕ ತಾಲೂಕಿನಲ್ಲಿ ಸಾಕಷ್ಟು ಹಾನಿಕೂಡ ಆಗಿದೆ. ನಮ್ಮ ವೃತ್ತಿ ಅತ್ಯಾದುನಿಕ ಸಲಕರನೆಗಳ ಖರಿದಿಯನಿಮಿತ್ಯ ಪ್ರತಿಯೊಬ್ಬರೂ ಸಾಲದಲ್ಲಿದ್ದು ಅದರ ಕಂತುಗಳನ್ನು ಕಟ್ಟುವ ಮಾರ್ಗತೋಚದಾಗಿದೆ ಅದರ ಜೊತೆಗ ಸ್ಟುಡಿಯೋ ಬಾಡಿಗೆ, ಮನೆ ಬಾಡಿಗೆ, ಮನೆಯ ಕರ್ಚುವೆಚ್ಚಗಳ ನಿರ್ವಹನೆ ಇವೆಲ್ಲ ಸಮಸ್ಯೆಗೆ ಪರಿಹಾರಕಾನದೆ ನಮ್ಮ ಬದುಕು ಚಿಂತಾಜನಕವಾಗಿದೆ . ನಾವು ಕೆಲಸಮಾಡುವ ಸಂದರ್ಭದಲ್ಲಿ ಜನಸಮೂಹದಲ್ಲಿ ಕೆಲಸ ಮಾಡುವ ಅನಿವಾರ್ಯತೆಯಿದ್ದು ಸಾಂಕ್ರಾಮಿಕ ರೋಗ ತಗಲುವ ಭಯ ನಮ್ಮನ್ನು ಕಾಡುತ್ತಿದೆ ಹಾಗಾಗಿ ಸಂಕಷ್ಟದಲ್ಲಿರುವ ವೃತ್ತಿನಿರತರ ನೆರವಿಗೆ ಬರಗೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಧು ಸೊನಗೊಜಿ, ಪದಾಧಿಕಾರಿಗಳಾದ ಗಂಗಾಧರ ಕಳ್ಳಿಗುದ್ದಿ, ಮಲ್ಲಿಕಾರ್ಜುನ ಕಾಂಬ್ಳೆ , ಬಿ.ಪ್ರಭಾಕರ, ಲಕ್ಷ್ಮಣ ಯಮಕನಮರಡಿ, ರವಿ ಉಪ್ಪಿನ, ಆನಂದ ಹಳಕಟ್ಟಿ ಇದ್ದರು.