RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಆರ್.ಎಸ್.ಎಸ್ ವತಿಯಿಂದ ಕನ್ಹೇರಿ ಮಠದಲ್ಲಿ ತಯಾರಿಸಿದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ ಔಷಧ ವಿತರಣೆ

ಗೋಕಾಕ:ಆರ್.ಎಸ್.ಎಸ್ ವತಿಯಿಂದ ಕನ್ಹೇರಿ ಮಠದಲ್ಲಿ ತಯಾರಿಸಿದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ ಔಷಧ ವಿತರಣೆ 

ಆರ್.ಎಸ್.ಎಸ್ ವತಿಯಿಂದ ಕನ್ಹೇರಿ ಮಠದಲ್ಲಿ ತಯಾರಿಸಿದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ ಔಷಧ ವಿತರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ, 18 :

 

ಗೋಕಾಕ ನಗರ ಸೇರಿದಂತೆ ತಾಲೂಕಿನಲ್ಲಿ ಕರೋನಾ ಮಹಾಮಾರಿ ಅತೀ ವೇಗವಾಗಿ ಹಬ್ಬುತಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಕನ್ಹೇರಿ ಮಠದಲ್ಲಿ ತಯಾರಿಸಿದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ ಔಷಧವನ್ನು ನಗರದಲ್ಲಿ ಸಾರ್ವಜನಿಕರು ಅತಿ ಉತ್ಸಾಹದಿಂದ ಪಡೆಯುತ್ತಿದ್ದು ಕಂಡು ಬಂದಿತು.
ಈ ಔಷಧವನ್ನು 1/2 ಲೀಟರ್ ಆರ್‍ಓ ನೀರಿನಲ್ಲಿ ಮಿಶ್ರಣ ಮಾಡಿ ಕೊಡಲಾಗುತ್ತಿದೆ. 10 ವರ್ಷ ಮೇಲ್ಪಟ್ಟವರು ಈ ಮಿಶ್ರಣವನ್ನು ಎರಡು ದಿನ ಮುಂಜಾನೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಕೊರೋನಾ ರೋಗದಿಂದ ದೂರವಿರಬಹುದೆಂದು ಸಂಘಟಕರು ತಿಳಿಸಿದ್ದಾರೆ.
ಇನ್ನೂ ನಾಲ್ಕು ದಿನಗಳ ವರೆಗೆ ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ 9ಗಂಟೆಯ ವರೆಗೆ ಮಾತ್ರ ನೀಡಲಾಗುತ್ತದೆ. ನಗರದ ಶೂನ್ಯ ಸಂಪಾದನಾ ಮಠ ಶಿಕ್ಷಣ ಸಂಸ್ಥೆ ಕೋಳಿಕಾಟಾ, ಕಿಲ್ಲಾದ ಶ್ರೀ ವೆಂಕಟೇಶ್ವರ ದೇವಸ್ಥಾನ ಆವರಣ, ಅಂಬಿಗೇರ ಗಲ್ಲಿಯ ಶ್ರೀ ಹಣಮಂತ ದೇವಸ್ಥಾನ, ಸೋಮವಾರ ಪೇಠೆಯ ಮುಪ್ಪಯ್ಯನ ಮಠ, ನಾಗನಾಥ ಮಂಗಲ ಕಾರ್ಯಾಲಯ, ಶ್ರೀ ಪಾಯಸಾಗರ ಶಾಲಾ ಆವರಣ, ಗೋಕಾಕ ಫಾಲ್ಸ್ ರಸ್ತೆಯ ನ್ಯೂ ಇಂಗ್ಲಿಷ ಸ್ಕೂಲ್ ಫಾಲ್ಸ್ ರೋಡ, ಮಯೂರ ಸ್ಕೂಲ್ ಆವರಣ, ಜಿ.ಆರ್.ಬಿ.ಸಿ ಆವರಣ ಹಾಗೂ ಕೆ.ಎಲ್.ಇ ಸ್ಕೂಲ್ ಉಮರಾಣಿ ಆಸ್ಪತ್ರೆ ಎದುರಿಗೆ ವಿತರಿಸಲಾಗುವದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

Related posts: