RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ: ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ : ದೂರದಿಂದಲೇ ಶುಭಾಶಯ ವಿನಿಮಯ

ಗೋಕಾಕ: ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ : ದೂರದಿಂದಲೇ ಶುಭಾಶಯ ವಿನಿಮಯ 

 

ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ : ದೂರದಿಂದಲೇ ಶುಭಾಶಯ ವಿನಿಮಯ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 14  :

 

ಕೊರೋನಾ ಸೋಂಕು  ಹರಡದಂತೆ  ತಡೆಗಟ್ಟುವ  ನಿಟ್ಟಿನಲ್ಲಿ  ರಾಜ್ಯಾದ್ಯಂತ  ಸೆಮಿ ಲಾಕಡೌನ ಜಾರಿಯಲ್ಲಿದ್ದು ಇಲ್ಲಿನ  ಮುಸ್ಲಿಂ ಸಮಾಜದ ಬಾಂಧವರು ಶುಕ್ರವಾರದಂದು ರಂಜಾನ್  (ಈದುಲ್  ಫಿತರ) ಹಬ್ಬವನ್ನು  ಅತ್ಯಂತ ಸರಳವಾಗಿ ತಮ್ಮ ತಮ್ಮ ಮನೆಗಳಲ್ಲಿ  ಆಚರಿಸಿದರು .

ಪ್ರತಿ ವರ್ಷ ರಂಜಾನ್  ಹಬ್ಬದಂದು  ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಬಾಂಧವರು ಸೆಮಿ ಲಾಕಡೌನ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ  ಈ ಬಾರಿಯೂ ಸಾಮೂಹಿಕ ಪ್ರಾರ್ಥನೆಯನ್ನು ರದ್ದು ಪಡೆಸಿ  ತಮ್ಮ ಮನೆಗಳಲ್ಲಿಯೇ ಕುಟುಂಬ ಸದಸ್ಯರೊಂದಿಗೆ   ಮಾಸ್ಕ ಧರಿಸಿ  ಸಾಮಾಜಿಕ ಅಂತರ ಕಾಪಾಡಿ ಸರಕಾರದ ನಿಯಮಗಳನ್ನು ಪಾಲಿಸಿ
ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು
ಪರಸ್ಪರ ಅಲಿಂಗನ, ಕೈ ಕುಲುಕಿಸದೇ ಅಂತರ ಕಾಪಾಡಿಯೇ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಮಾತ್ರ ಹೊಸಬಟ್ಟೆ ಧರಿಸಿದರೆ‌ ಬಹುತೇಕರು ಶುಭ್ರ ಬಟ್ಟೆಯಲ್ಲಿಯೇ  ಹಬ್ಬ ಆಚರಿಸಿದರು. 

ಈ ಸಂದರ್ಭದಲ್ಲಿ ಮೌಲಾನ ತೌಫೀಕ ಯಲಿಗಾರ,
ಅಂಜುಮನ್ ಕಮಿಟಿ ಅಧ್ಯಕ್ಷ ಜಾವೇದ ಗೋಕಾಕ, ನಗರಸಭೆ ಸ್ಥಾಯಿ ಸಮಿತಿ ಚೇರಮನ್ ಕುತುಬ್ಬುದ್ದೀನ ಗೋಕಾಕ ,  ಸಾದಿಕ ಹಲ್ಯಾಳ,  ಜಾಫರ್ ಶಾಬಾಶಖಾನ , ಸಲ್ಲಿಂ ಗೋಕಾಕ, ಇಸ್ಲಾಂ ಗೋಕಾಕ, ಶಫೀ  ಜಾಫರ್, ಕಯ್ಯೂಮ ಖೈರದಿ, ಸಲ್ಲಿಂ ಮುಲ್ಲಾ , ಉಪಸ್ಥಿತರಿದ್ದರು.

Related posts: