ಗೋಕಾಕ:ನಗರಸಭೆ ಸ್ಥಾಯಿ ಸಮಿತಿಗೆ ಕುತುಬುದ್ದೀನ ಗೋಕಾಕ ಅವಿರೋಧ ಆಯ್ಕೆ
ನಗರಸಭೆ ಸ್ಥಾಯಿ ಸಮಿತಿಗೆ ಕುತುಬುದ್ದೀನ ಗೋಕಾಕ ಅವಿರೋಧ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 8ನೇ ವಾರ್ಡ್ ಸದಸ್ಯ ಕುತುಬುದ್ದೀನ ಗೋಕಾಕ ಆಯ್ಕೆಯಾಗಿದ್ದಾರೆ.
ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅಧ್ಯಕ್ಷತೆಯಲ್ಲಿ ಶನಿವಾರದಂದು ನಡೆದ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಕುತುಬುದ್ದೀನ ಗೋಕಾಕ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಲಾಯಿತು.
ಪೌರಾಯುಕ್ತ ಶಿವಾನಂದ ಹಿರೇಮಠ , ಉಪಾಧ್ಯಕ್ಷ ಬಸವರಾಜ ಅರೆನ್ನವರ , ಹಿರಿಯ ಸದಸ್ಯ ಅಬ್ದುಲರಹಮಾನ್ ದೇಸಾಯಿ, ನಗರಸಭೆಯ ಲೆಕ್ಕ ಅಧೀಕ್ಷಕರಾದ ಎಂ.ಎನ್. ಸಾಗರೇಕರ, ಅಭಿಯಂತರರುಗಳಾದ ವ್ಹಿ.ಎಂ.ಸಾಲಿಮಠ, ಎಂ.ಹೆಚ್.ಗಜಾಕೋಶ ಇದ್ದರು.