ಗೋಕಾಕ:ಗೋಕಾಕ ಹೆಸ್ಕಾಂ ಕಛೇರಿಯಲ್ಲಿ ರೆಡ್ : ಲಂಚ ಸಮೇತ ಎಸಿಬಿ ಬಲೆಗೆ ಬಿದ್ದ ಹೆಸ್ಕಾಂನ ಭ್ರಷ್ಟ ಅಧಿಕಾರಿಗಳು
ಗೋಕಾಕ ಹೆಸ್ಕಾಂ ಕಛೇರಿಯಲ್ಲಿ ರೆಡ್ : ಲಂಚ ಸಮೇತ ಎಸಿಬಿ ಬಲೆಗೆ ಬಿದ್ದ ಹೆಸ್ಕಾಂನ ಭ್ರಷ್ಟ ಅಧಿಕಾರಿಗಳು
ಗೋಕಾಕ ಜ 29 : ಹೊಸ ಟಿಸಿ ಅಳವಡಿಸಲು ಲಂಚ ಸ್ವೀಕರಿಸುತ್ತಿರುವಾಗ ಹೆಸ್ಕಾಂ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದ ಘಟನೆ ಶುಕ್ರವಾರದಂದು ಗೋಕಾಕ ನಗರದಲ್ಲಿ ಜರುಗಿದೆ.
ಹೊಲದಲ್ಲಿ ಹೊಸದಾಗಿ ಟಿಸಿ ಅಳವಡಿಸಲು ರೈತನೋರ್ವನಿಂದ 60 ಸಾವಿರ ರೂ ಲಂಚ ಪಡೆಯುತ್ತಿದ್ದ ಗೋಕಾಕ ಹೆಸ್ಕಾಂ ಉಪ ವಿಭಾಗದ (ಸೆಕ್ಷನ್ ಆಫೀಸರ್ ) ವಿಭಾಗ ಅಧಿಕಾರಿ ಹಾಗೂ ಸಿಬ್ಬಂದಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಲೋಳಸೂರ ಸೆಕ್ಷನ್ ಆಫೀಸರ್ ಪ್ರಕಾಶ ಪರೀಟ, ಹಾಗೂ ಸಿಬ್ಬಂದಿ ಮಲ್ಲಯ್ಯ ಹಿರೇಮಠ ಲಂಚ ಸ್ವೀಕರಿಸಿರುವ ಅರೋಪಿಗಳಾಗಿದ್ದು, ಎಸಿಬಿ ಅಧಿಕಾರಿಗಳು ಇಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅರಭಾವಿ ಗ್ರಾಮದ ರೈತ ಆನಂದ ಧರ್ಮಟ್ಟಿ ಅವರು ನೀಡಿದ ದೂರಿನ ಆಧಾರದ ಮೇಲೆ
ಎಸಿಬಿ ಡಿ.ವಾಯ್.ಎಸ್.ಪಿ ವೇಣುಗೋಪಾಲ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಎ.ಎಸ್. ಗುದಿಗೊಪ್ಪ, ಸುನೀಲಕುಮಾರ ಹಾಗೂ ಸಿಬ್ಬಂದಿಗಳು ದಾಳಿ
ನಡೆಸಿ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ರೆಡ್‌ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದಿದ್ದಾರೆ.