RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಆನ್‍ಲಾಯಿನ್ ಲಾಗಿನ್ ಆಗಿ ತುರ್ತಾಗಿ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳಿ : ಡಾ: ರವೀಂದ್ರ ಅಂಟಿನ್

ಗೋಕಾಕ:ಆನ್‍ಲಾಯಿನ್ ಲಾಗಿನ್ ಆಗಿ ತುರ್ತಾಗಿ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳಿ : ಡಾ: ರವೀಂದ್ರ ಅಂಟಿನ್ 

ಆನ್‍ಲಾಯಿನ್ ಲಾಗಿನ್ ಆಗಿ ತುರ್ತಾಗಿ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳಿ : ಡಾ: ರವೀಂದ್ರ ಅಂಟಿನ್

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 27 :

 
ಅನಾರೋಗ್ಯ ಪೀಡಿತರು ತುರ್ತು ಸಂದರ್ಭದಲ್ಲಿ ಇ-ಸಂಜೀವಿನಿ ಆಪ್ಯ್ ಮೂಲಕ ಆನ್‍ಲಾಯಿನ್ ಲಾಗಿನ್ ಆಗಿ ತಮ್ಮ ರೋಗಗಳಿಗೆ ತುರ್ತಾಗಿ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರವೀಂದ್ರ ಅಂಟಿನ್ ತಿಳಿಸಿದರು.
ಬುಧವಾರದಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯನುದ್ದೇಶಿಸಿ ಮಾತನಾಡಿದ ಅವರು, ಇ-ಸಂಜೀವಿನಿ ಮೂಲಕ ಲಾಗಿನ ಆದಾಗ ತಕ್ಷಣವೇ ರೋಗಕ್ಕೆ ಸಂಬಂಧಿಸಿದ ವೈದ್ಯರಿಗೆ ಕರೆ ಹೋಗಲಿದ್ದು ವೈದ್ಯರು ತಮ್ಮ ಕರೆಗೆ ಉತ್ತರಿಸಿ ವೈದ್ಯಕೀಯ ಸಲಹೆಗಳನ್ನು ನೀಡಲಿದ್ದಾರೆ. ಈ ಪ್ರಕ್ರೀಯೆಯು ಮುಂಜಾನೆ 8 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದರು.
ನವಜಾತು ಶಿಶು ಆರೈಕೆಯಲ್ಲಿ ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವದರಿಂದ ನಮಗೆ ಪ್ರಥಮಸ್ಥಾನ ಗಳಿಸಲು ಸಾಧ್ಯವಾಗಿದೆ. ಅಲ್ಲದೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಎಲ್ಲ ಆರೈಕೆಯ ವಿಭಾಗಗಳಲ್ಲಿಯೂ ಕೂಡಾ ನಮ್ಮ ಆಸ್ಪತ್ರೆಯು ಜಿಲ್ಲಾ ಮಟ್ಟದಲ್ಲಿಯೂ ಕೂಡಾ ಪ್ರಥಮ ಸ್ಥಾನವನ್ನು ಗಳಿಸಿರುವುದು ಸಂತಸ ತಂದಿದೆ ಇದಕ್ಕೆ ಸಚಿವರರಾದ ರಮೇಶ ಜಾರಕಿಹೊಳಿ, ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ವೈದ್ಯರು ಸಿಬ್ಬಂದಿ, ಸಾರ್ವಜನಿಕರ ಸಹಕಾರವೇ ಮುಖ್ಯವಾಗಿದ್ದು ಇನ್ನೂ ಹೆಚ್ಚಿನ ಕಾರ್ಯವನ್ನು ಮಾಡಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ: ಎಮ್.ಎಸ್.ಕೊಪ್ಪದ ಮಾತನಾಡಿ ಭಾನುವಾರ ದಿ. 31 ರಂದು 0-05 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಆಯೋಜಿಸಲಾಗಿದ್ದು, ಇದಕ್ಕಾಗಿ 157 ಗ್ರಾಮಗಳಲ್ಲಿ 320 ಬೂತಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಸಾರ್ವಜನಿಕರು ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿ ನಡೆಯುವ ಸಂದರ್ಭದಲ್ಲಿ ಹೃದಯ ತಜ್ಞ ಡಾ: ಮಹೇಶ ಕೋಣಿ ಅವರು ಇ-ಸಂಜೀವಿನಿ ಆಪ್ಯ್ ಮೂಲಕ ತಮನ್ನು ಸಂಪರ್ಕಿಸಿದ ರೋಗಿಗೆ ತುರ್ತು ಚಿಕಿತ್ಸಾ ಮಾಹಿತಿಯನ್ನು ನೀಡುವ ಮೂಲಕ ಇದರ ಪ್ರಯೋಜನೆಯ ಕುರಿತು ಪತ್ರಕರ್ತರಿಗೆ ವಿವರಿಸಿದರು.

Related posts: