RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ : ತಾಲೂಕು ಘೋಷಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಭೀಮಪ್ಪ ಗಡಾದ ಗುಡುಗು

ಮೂಡಲಗಿ : ತಾಲೂಕು ಘೋಷಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಭೀಮಪ್ಪ ಗಡಾದ ಗುಡುಗು 

ಮೂಡಲಗಿ ತಾಲೂಕು ಘೋಷಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಭೀಮಪ್ಪ ಗಡಾದ ಗುಡುಗು

ಮೂಡಲಗಿ ಸೆ 8: ರಾಜಕೀಯ ಕೈವಾಡದ ಕಾರಣಕ್ಕೆ ಮೂಡಲಗಿ ತಾಲೂಕು ಆದೇಶ ಸರ್ಕಾರ ಹಿಂಪಡೆದಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದ್ದಾರೆ

ರಾಜ್ಯ ಸರಕಾರ ಮೂಡಲಗಿ ತಾಲುಕು ಘೋಷಣೆ ಹಠಾತ್ತನೆ ಹಿಂಪಡಿದ್ದುದನ್ನು ಖಂಡಿಸಿ ಮೂಡಲಗಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಗಡಾದ ಅವರು ಸರಕಾರದ ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಗುಡುಗಿದ್ದಾರೆ
ಮೂಡಲಗಿ ಅಭಿವೃದ್ಧಿ ಆಗಬಾರದು ಎಂದು ಕೆಲ ರಾಜಕೀಯ ಶಕ್ತಿಗಳು ಪ್ರಯತ್ನಾಡುತ್ತಿವೆ ‌ ಸರ್ಕಾರವು ತಾಲೂಕು ರಚನಾ ಸಮೀತಿಯ ವರದಿಯಲ್ಲಿಲ್ಲದ 9 ತಾಲೂಕುಗಳನ್ನು ಸೇರ್ಪಡೆ ಮಾಡಿದೆ ಆದರೆ ವರದಿಯಲ್ಲಿದ್ದ ಮೂಡಲಗಿಯನ್ನು ಯಾಕೆ ಕೈ ಬಿಟ್ಟಿದ್ದೆ ಎಂದು ಸರಕಾರವನ್ನು ಪ್ರಶ್ನಿಸಿರುವ ಗಡಾದ

ಇದಕ್ಕೆ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಉತ್ತರಿಸಬೇಕು ಎಂದು ಖಾರವಾಗಿ ಪ್ರತಿಕ್ರಿಯೆಸಿದ್ದಾರೆ

ಸರ್ಕಾರ ಒಪ್ಪಿಕೊಂಡು ಮೂಡಲಗಿ ತಾಲೂಕು ಕೇಂದ್ರವನ್ನಾಗಿ ಘೋಷಿಸುವವರಗೂ ಅನಿರ್ದಿಷ್ಟ ಅವದಿ ಪ್ರತಿಭಟನೆ ಮಾಡುವುದಾಗಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪಾ ಗಡಾದ ಹೇಳಿದ್ದಾರೆ

Related posts: