RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ : ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಸದೃಢರಾಗಿ : ಶಾಸಕ ಸತೀಶ ಕರೆ

ಗೋಕಾಕ : ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಸದೃಢರಾಗಿ : ಶಾಸಕ ಸತೀಶ ಕರೆ 

ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಸದೃಢರಾಗಿ : ಶಾಸಕ ಸತೀಶ ಕರೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 12 :

 
ಇಂದಿನ ಯುವ ಶಕ್ತಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಸದೃಢರಾಗಿ ಆರೋಗ್ಯವಂತ ಸಮಾಜ ನಿರ್ಮಿಸುವಂತೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ಸಂಜೆ ಇಲ್ಲಿಯ ಹೊಸಪೇಟಗಲ್ಲಿಯಲ್ಲಿರುವ ಬಾಡಿಲೈನ್ ಪಿಟ್ನೇನೆಸ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆ ಮಾಡಲು ಸದೃಢ ಆರೋಗ್ಯ ಅತೀ ಅವಶ್ಯವಾಗಿದೆ. ಯುವ ಶಕ್ತಿ ದುಶ್ಚಟಗಳಿಂದ ದೂರುಳಿದು ವ್ಯಾಯಾಮ, ಯೋಗಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿ ಒಳ್ಳೆಯ ಸಾಧನೆಗಳನ್ನು ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಟೇಶ.ಜಿ, ಶಿವು ಪಾಟೀಲ, ಸುನೀಲ ಅಂಕದವರ ಸೇರಿದಂತೆ ಅನೇಕರು ಇದ್ದರು.

Related posts: