ಗೋಕಾಕ:ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನ-16 ರಿಂದ ಡಿ-15ರ ವರಗೆ ಅವಕಾಶ : ಪ್ರಕಾಶ ಹೊಳೆಪ್ಪಗೋಳ
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನ-16 ರಿಂದ ಡಿ-15ರ ವರಗೆ ಅವಕಾಶ : ಪ್ರಕಾಶ ಹೊಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ: 09-
ಗೋಕಾಕ ವಿಧಾನ ಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯ ವಿಶೇಷ ಸಂಕ್ಷೀಪ್ತ ಪರಿಷ್ಕರಣೆ ಕಾರ್ಯವು ನ-16 ರಿಂದ ಪ್ರಾರಂಭವಾಗಲಿದೆ. ಅರ್ಹತಾ ದಿನಾಂಕ: 01-01-2021 ವನ್ನಾಧರಿಸಿ 18 ವರ್ಷ ಪೂರ್ಣಗೊಳ್ಳುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ನ-16 ರಿಂದ ಡಿ-15ರ ವರಗೆ ಅವಕಾಶವಿದೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಸೇರ್ಪಡೆಗೆ ನಮೂನೆ-6, ಬಿಡತಕ್ಕವುಗಳಿಗೆ ನಮೂನೆ-7, ತಿದ್ದುಪಡಿಗಾಗಿ ನಮೂನೆ-8ನ್ನು ಮತ್ತು ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವರ್ಗಾವಣೆಗಾಗಿ ನಮೂನೆ-8ಎ ಅರ್ಜಿಗಳನ್ನು ಸಂಬಂಧಿಸಿದ ಆಯಾ ಮತಗಟ್ಟೆ ಅಧಿಕಾರಿಗಳಿಗೆ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಸಾರ್ವಜನಿಕರಿಗೆ ಮಾಹಿತಿ ಪೂರೈಸುವ ದೃಷ್ಟಿಯಿಂದ ಹಾಗೂ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಜರುಗಿಸಲು ಮಿನಿ ವಿಧಾನಸೌಧ ತಹಶೀಲ್ದಾರ ಕಾರ್ಯಾಲಯದಲ್ಲಿ ನಿಯಂತ್ರಣಾ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ದೂರವಾಣಿ ಸಂಖ್ಯೆ 08332-225073 ನೇದ್ದಕ್ಕೆ ಕರೆ ಮಾಡಿ ಮತದಾರರ ಪಟ್ಟಿಗಳ ಕುರಿತು ಯಾವುದೇ ಸಮಸ್ಯಗಳಿಗೆ ದೂರವಾಣಿ ಮುಖಾಂತರ ಪರಿಹಾರ ಕಂಡುಕೊಳ್ಳಬಹುದಾಗಿದೆ. 09-ಗೋಕಾಕ ಮತಕ್ಷೇತ್ರದ ಸಾರ್ವಜನಿಕರು ಸದರಿ ಕರೆ ನಿಯಂತ್ರಣ ಕೊಠಡಿಯ ಸದುಪಯೋಗ ಪಡೆಯುವಂತೆ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.