ಘಟಪ್ರಭಾ:ರಹೇಮಾನ ಪೌಂಡೇಶನ್ , ಹಜರತ ಬಿಲಾಲ ವೆಲಫೇರ್ ಸೊಸೈಟಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ
ರಹೇಮಾನ ಪೌಂಡೇಶನ್ , ಹಜರತ ಬಿಲಾಲ ವೆಲಫೇರ್ ಸೊಸೈಟಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 8 :
ಇಲ್ಲಿನ ರಹೇಮಾನ ಪೌಂಡೇಶನ್ , ಹಜರತ ಬಿಲಾಲ ವೆಲಫೇರ್ ಸೊಸೈಟಿ , ಮದಿನಾ ಮಸೀದಿ , ಹಜರತ ಬಿಲಾಲ ಮಸೀದಿ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರದಂದು ಮೊಹಮದಿಯಾ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಡಾ ಘನಶಾಮ ವೈದ ಉಚಿತ ಆರೋಗ್ಯ ತಪಾಸಣೆ ಕಾರ್ಯವು ಪುಣ್ಯದ ಕಾರ್ಯವಾಗಿದ್ದು, ಸಂಘಟನೆಗಳು ಇಂತಹ ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದು ಹೇಳಿದರು
ಘಟಪ್ರಭಾ ಠಾಣೆಯ ನೂತನ ಪಿಎಸ್ಐ ರಾಘವೇಂದ್ರ ಖೋತ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಹಿಂತಹ ಶಿಬಿರಗಳನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜಿಸಿ ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆ ಮುಂದಾಗಿರುವ ರಹೇಮಾನ ಪೌಂಡೇಶನ್ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಮಂಜುನಾಥ್ ಗರೋಶಿ, ಡಾ. ದೇವೆಗೌಡ ಐ , ಡಾ. ಆರ್.ಬಿ ಜಮಾದಾರ, ಡಾ.ಜಾವೇದ್ ಜಗದಾಳ, ಡಾ. ಇಸ್ಲಾಯಿಲ್ ಸಂಕದಾಳ, ಡಾ. ಎನ್.ಡಿ ಕಮತನೂರ , ಡಾ. ಜಿಯಾವುದ್ದೀನ ಗವಾಜ, ಡಾ. ನೂರೈನ್ ಜಮಾದಾರ, ಡಾ.ಅಮರೀನ ಪಟೇಲ, ಡಾ.ಸಜೀಯಾಜೈಮದ ನಾಯಿಕ , ಮುಖಂಡರುಗಳಾದ ಪರವೇಜ್ ನಾಯಿಕ, ಹನೀಫ ಭಾಯಿ, ಮೌಲಾನಾ ಅಬ್ದುಲ್ಲಾ, ಫಾರೂಕ.ಶೇಖ, ಫಯಾಜ.ಶೇಖ, ದಸ್ತಗಿರ.ಹಿಡಕಲ, ಮುನ್ನಾ.ಸೌದಾಗರ, ಹಾಜಿ ಹಜರತ.ಮುಜಾವರ, ಅಷ್ಫಾಕ.ಮುಲ್ಲಾ,
ಮೌಲಾನಾ.ತೋಹಿದ, ಮೌಲಾನಾ ಐಜಾಜ್, ಮುಫ್ತಿ ಇಕ್ಬಾಲ ಮುಲ್ಲಾ, ಅಬಿದ ಜಗದಾಳ , ಮುಸ್ತಾಕ ಸೌದಾಗರ ಸೇರಿದಂತೆ ಇತರರು ಉಪಸ್ಥಿತರಿದ್ದರು
ಶಿಬಿರದಲ್ಲಿ 800 ಕ್ಕೂ ಹೆಚ್ಚು ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು