ಗೋಕಾಕ:ಕರ್ನಾಟಕ ಬಂದ್ಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ; ರೈತ ಮುಖಂಡರಿಂದ ರಸ್ತೆ ತಡೆ ನಡೆಯಿಸಿ ಪ್ರತಿಭಟನೆ
ಕರ್ನಾಟಕ ಬಂದ್ಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ; ರೈತ ಮುಖಂಡರಿಂದ ರಸ್ತೆ ತಡೆ ನಡೆಯಿಸಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 28 :
ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ, ಕರಾಳ ಸುಗ್ರೀವಾಜ್ಞೆ ವಾಪಸ್ ಪಡೆಯಲು ಒತ್ತಾಯಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸ್ ಸಂಚಾರ ಎಂದಿನಂತೆ ಇದ್ದರು ಸಹ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ , ಆಟೋ ಮತ್ತು ಇತರೆ ವಾಹನ ಸಂಚಾರ ವಿರಳವಾಗಿದೆ. ಅಲ್ಲಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ.
ನಗದರ ನಾಕಾ ನಂ 1 ರಲ್ಲಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ರೈತ ಮುಖಂಡ ಭೀಮಶಿ ಗದಾಡಿ , ಗಣಪತಿ ಈಳಿಗೇರ ನೇತೃತ್ವದಲ್ಲಿ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಜಯ ಕರ್ನಾಟಕ , ಕರ್ನಾಟಕ ರಕ್ಷಣಾ ವೇದಿಕೆ ಸಂತೋಷ ಅರಳಿಕಟ್ಟಿ ಬಣ, ಕರ್ನಾಟಕ ಯುವ ಸೇನೆ , ದಲಿತಪರ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ .