RNI NO. KARKAN/2006/27779|Tuesday, January 27, 2026
You are here: Home » breaking news » ಘಟಪ್ರಭಾ:ದೀನ ದಯಾಳ ಉಪಾದ್ಯಾಯ ಜನ್ಮ ದಿನದ ನಿಮಿತ್ಯ ಒಂದು ವಾರದ ವರೆಗೆ ಸೇವಾ ಸಪ್ತಾಹ

ಘಟಪ್ರಭಾ:ದೀನ ದಯಾಳ ಉಪಾದ್ಯಾಯ ಜನ್ಮ ದಿನದ ನಿಮಿತ್ಯ ಒಂದು ವಾರದ ವರೆಗೆ ಸೇವಾ ಸಪ್ತಾಹ 

ದೀನ ದಯಾಳ ಉಪಾದ್ಯಾಯ ಜನ್ಮ ದಿನದ ನಿಮಿತ್ಯ ಒಂದು ವಾರದ ವರೆಗೆ ಸೇವಾ ಸಪ್ತಾಹ

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಸೆ 15 :

 

ದೀನ ದಯಾಳ ಉಪಾದ್ಯಾಯ ಜನ್ಮ ದಿನದ ನಿಮಿತ್ಯ ಒಂದು ವಾರದ ವರೆಗೆ ಸೇವಾ ಸಪ್ತಾಹ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನವಿಲಮಾಳ ದೇವಸ್ಥಾನದ ಆವರಣದಲ್ಲಿ ಮಂಗಳವಾರದಂದು ಸ್ವಚ್ಛಗೊಳಿಸಲಾಯಿತು.
ಜಲಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರ ನಿರ್ದೇಶನದಂತೆ ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನವಿಲಮಾಳ ದೇವಸ್ಥಾನದ ಅವರಣದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಜೆಪಿ ಗೋಕಾಕ ಗ್ರಾಮಿಣ ಅಧ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಹಿರಿಯ ಮುಖಂಡರಾದ ಜಿ.ಎಸ್.ರಜಪೂತ, ಡಿ.ಎಮ್.ದಳವಾಯಿ, ಎಸ್.ಆಯ್.ಬೆನವಾಡೆ, ವಿರುಪಾಕ್ಷಿ ಯಲಿಗಾರ, ಮಹೇಶಗೌಡಾ ಪಾಟೀಲ, ರಾಜಶೇಖರ ರಜಪೂತ, ತಾ.ಪಂ.ಸದಸ್ಯರಾದ ಲಗಮಣ್ಣ ನಾಗನ್ನವರ, ರಾಜ್ಯ ಮಹಿಳಾ ಮೂರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಶೀತಲ ದೇಮಣ್ಣವರ, ಮದಾರಸಾಬ ಜಗದಾಳೆ, ಎಮ್.ಆಯ್.ಜಮಾದಾರ, ಆದಪ್ಪ ಮಗದುಮ್, ಮಹಾದೇವ ಕೋಳಿ, ಪರಶುರಾಮ ಗಾಡಿವಡ್ಡರ, ಕಲ್ಲೋಳೆಪ್ಪ ಗಾಡಿವಡ್ಡರ ಸೇರಿದಂತೆ ಅನೇಕರು ಇದ್ದರು.

Related posts: