RNI NO. KARKAN/2006/27779|Saturday, May 10, 2025
You are here: Home » breaking news » ಗೋಕಾಕ:ಜಾನುವಾರಗಳಿಗೆ ರೋಗ ಲಕ್ಷಣ ಕಂಡು ಬಂದರೆ ನಿರ್ಲಕ್ಷ ಮಾಡಬೇಡಿ : ಡಾ. ಮೋಹನ ಕಮತ

ಗೋಕಾಕ:ಜಾನುವಾರಗಳಿಗೆ ರೋಗ ಲಕ್ಷಣ ಕಂಡು ಬಂದರೆ ನಿರ್ಲಕ್ಷ ಮಾಡಬೇಡಿ : ಡಾ. ಮೋಹನ ಕಮತ 

ಜಾನುವಾರಗಳಿಗೆ ರೋಗ ಲಕ್ಷಣ ಕಂಡು ಬಂದರೆ ನಿರ್ಲಕ್ಷ ಮಾಡಬೇಡಿ : ಡಾ. ಮೋಹನ ಕಮತ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 3 :

 
ಜಾನುವಾರುಗಳಿಗೆ ಚರ್ಮಗಂಟು/ಚರ್ಮಮುದ್ದೆ ರೋಗವು ಕಂಡು ಬರುತ್ತಿದ್ದು ರೈತರು ಜಾನುವಾರಗಳನ್ನು ನಿರ್ಲಕ್ಷ ಮಾಡದೇ ತಕ್ಷಣವೇ ಚಿಕಿತ್ಸೆ ಕೊಡಿಸುವಂತೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಅವರು ರೈತರಲ್ಲಿ ಕೋರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈ ರೋಗವು ಜಾನುವಾರುಗಳಿಗೆ ಸೊಳ್ಳೆ, ನೊಣ, ಉಣ್ಣೆ ಹಾಗೂ ಕಲುಷಿತ ನೀರಿನಿಂದ ಬರುವುದು ಈ ರೋಗವನ್ನು ತಡೆಗಟ್ಟಲು ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಆರೋಗ್ಯವಂತ ಜಾನುವಾರುಗಳಿಂದ ಬೇರ್ಪಡಿಸಿ ಚಿಕಿತ್ಸೆ ಕೊಡಿಸಬೇಕು. ಜಾನುವಾರುಗಳಿರುವ ಸ್ಥಳವನ್ನು ಶುಚಿಯಾಗಿಡುವಂತೆ ತಿಳಿಸಿದ್ದಾರೆ.
ಈ ರೋಗದಿಂದ ಜಾನುವಾರಗಳಲ್ಲಿ ಜ್ವರ ಕಾಣಿಸುವುದು, ಆಹಾರ ತಿನ್ನುವುದನ್ನು ಕಡಿಮೆ ಮಾಡುವುದು, ಹಾಲಿನ ಇಳುವರಿ ಕಡಿಮೆಯಾಗುವುದು ಚರ್ಮದಲ್ಲಿ ಗಂಟು ಕಾಣಿಸಿಕೊಳ್ಳುವುದು, ಕಣ್ಣು ಮೂಗಿನಲ್ಲಿ ಜೊಲ್ಲು ಹಾಗೂ ನೀರು ಸುರಿಯುವುದು, ಗರ್ಭ ಧರಿಸಿದ ಹಸುಗಳಲ್ಲಿ ಗರ್ಭಪಾತವಾಗುವ ಹಾಗೂ ಚರ್ಮದ ಗಂಟುಗಳು ಒಡೆದು ಹುಣ್ಣಾಗುವ ಲಕ್ಷಣಗಳು ಕಂಡು ಬರುತ್ತಿದ್ದು, ಈ ರೋಗವು ವೈರಾಣುವಿನಿಂದ ಹರಡುವ ರೋಗವಾಗಿದ್ದು, ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವದಿಲ್ಲ. ಆದರೆ ರೋಗದ ಲಕ್ಷಣಗಳಿಗೆಗನುಗುಣವಾಗಿ ಎಂಟಿಬಯೋಟಿಕ್ ನೀಡಬಹುದಾಗಿದೆ ಅದಕ್ಕಾಗಿ ರೈತರು ತಮ್ಮ ಜಾನುವಾರಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ತಕ್ಷಣವೇ ತಮ್ಮ ಹತ್ತಿರ ಪಶು ಚಿಕಿತ್ಸಾ ಕೇಂದ್ರಗಳಿಗೆ ತೆರಳಿ ಚಿಕಿತ್ಸೆಯನ್ನು ಕೊಡಿಸಬೇಕೆಂದು ಡಾ. ಮೋಹನ ಕಮತ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: